ಮೋದಿ ನಿಮ್ಮ ಸಮಸ್ಯೆ ಕೇಳುವುದರ ಬದಲಿಗೆ ತಮ್ಮ ಗೋಳು ತೋಡಿಕೊಂಡು ಅಳುತ್ತಾರೆ; ಪ್ರಿಯಾಂಕ ಗಾಂಧಿ ಲೇವಡಿ

ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನದ ದಿನ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ನಾಯಕರ ಆರೋಪ – ಪ್ರತ್ಯಾರೋಪ ತಾರಕಕ್ಕೆ ಏರಿದೆ. ಪ್ರತಿಪಕ್ಷಗಳವರು ನನ್ನನ್ನು ನಿಂದಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಟಾಂಗ್ ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಭಾನುವಾರದಂದು ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಜನರ ಸಮಸ್ಯೆ ಕೇಳುವುದರ ಬದಲಾಗಿ ಅವರ ಗೋಳು ತೋಡಿಕೊಂಡು ಅಳುತ್ತಾರೆ. ಮೋದಿಯವರೇ ನಿಂದನೆಗೆ ಹೆದರಬೇಡಿ. ನನ್ನ ಸಹೋದರ ರಾಹುಲ್ ಗಾಂಧಿಯನ್ನು ನೋಡಿ ಕಲಿಯಿರಿ ಎಂದು ಹೇಳಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಇರುವಾಗ ನಿಂದನೆಗಳನ್ನು ಸಹಿಸಿಕೊಳ್ಳಲೇಬೇಕಾಗುತ್ತದೆ. ಮೋದಿ ಅವರ ಕುರಿತು ಬಂದ ನಿಂದನೆಗಳನ್ನು ಬರೆದರೆ ಕೇವಲ ಒಂದು ಪುಟವಾಗಬಹುದು. ಆದರೆ, ನಮ್ಮ ಕುಟುಂಬಕ್ಕೆ ಬಂದ ನಿಂದನೆಗಳ ಬಗ್ಗೆ ಬರೆದರೆ ಒಂದು ಪುಸ್ತಕವೇ ಆಗುತ್ತದೆ ಎಂದು ಹೇಳಿದ ಪ್ರಿಯಾಂಕ ಗಾಂಧಿ, ನಿಂದನೆ ಅಷ್ಟೇ ಅಲ್ಲ ಗುಂಡು ಹೊಡೆದರೂ ಕೂಡ ನಮ್ಮ ಕುಟುಂಬ ಹೆದರುವುದಿಲ್ಲ ಎಂದು ಗುಡುಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read