ಮೊಡವೆ ಮುಖದ ಶೇವಿಂಗ್ ಬಲು ಕಷ್ಟದ ಕೆಲಸ

ಪುರುಷರ ಮುಖದ ಮೇಲೂ ಮೊಡವೆಗಳು ಮೂಡುತ್ತವೆ. ಆ ಸಂದರ್ಭದಲ್ಲಿ ಮುಖದ ಶೇವಿಂಗ್ ಮಾಡುವುದು ಸವಾಲಿನ ಕೆಲಸವಾಗಿ ಪರಿಣಮಿಸುತ್ತದೆ.

ಮೊಡವೆ ಮುಖದವರು ಶೇವಿಂಗ್ ಮಾಡುವ ಮುನ್ನ ಬಿಸಿನೀರಿನ ಸ್ನಾನ ಮಾಡಿ ಅಥವಾ ಮುಖಕ್ಕೆ ಹಬೆಯಾಡಿಸಿ. ಇದರಿಂದ ತ್ವಚೆ ಮತ್ತು ಮುಖದ ಮೇಲಿನ ಕೂದಲನ್ನು ಸುಲಭವಾಗಿ ನಿವಾರಿಸಬಹುದು.

ಉತ್ತಮ ದರ್ಜೆಯ ರೇಜರ್ ಕೊಳ್ಳಿ. ಒಮ್ಮೆ ಸವರಿದಾಗಲೇ ಎಲ್ಲಾ ಕೂದಲು ಹೋಗುವಂತಿರಲಿ. ಆಗಾಗ ರೇಜರ್ ನ ಬ್ಲೇಡ್ ಬದಲಿಸುತ್ತಿರಿ.

ಮೊಡವೆ ಸಮಸ್ಯೆ ಇದ್ದವರು ಟ್ರಿಮ್ಮರ್ ಅಥವಾ ಎಲೆಕ್ಟ್ರಿಕ್ ಶೇವರ್ ಬಳಸದಿರುವುದು ಉತ್ತಮ. ಬ್ಲೇಡ್ ಶುಚಿಗೊಳಿಸಿಯೇ ರೇಜರ್ ಬಳಸಿ. ಉತ್ತಮ ದರ್ಜೆಯ ಮಾಯಿಸ್ಚರೈಸರ್ ಮತ್ತು ಶೇವಿಂಗ್ ಕ್ರೀಮ್ ಬಳಸಿ. ಇದು ತ್ವಚೆಯನ್ನು ಮೃದುಗೊಳಿಸಿ ನಿಮ್ಮ ಕೆಲಸವನ್ನು ಸರಾಗಗೊಳಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read