ಮೂರ್ಖತನಕ್ಕೆ ಮತ್ತೊಂದು ಹೆಸರೇ ಪ್ರತಾಪ್‌ ಸಿಂಹ; ಟ್ವೀಟ್‌ ಮೂಲಕ ಕಾಂಗ್ರೆಸ್‌ ಟಾಂಗ್

ಸಂಸದ ಪ್ರತಾಪ್‌ ಸಿಂಹ ಅವರ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ ನಲ್ಲಿ ವ್ಯಕ್ತಿಯೊಬ್ಬರು, ಪ್ರತಾಪ್‌ ಅಣ್ಣ ನಮ್ಮ ಮನೆಯಲ್ಲಿ ಹದಿನೇಳು ಓಟು ಎಲ್ಲ ಸಿದ್ದರಾಮಣ್ಣಗೆ ಎಂದು ಹಾಕಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರತಾಪ್‌ ಸಿಂಹ, ಹದಿನೇಳು ಓಟು ? ಅಣ್ಣ ತಮ್ಮ ನಿನ್ನ ಹೆಸರು ಮೋಹನ್ನಾ ಮಹಮ್ಮದ್ದಾ ಎಂದು ವ್ಯಂಗ್ಯವಾಗಿ ಕೇಳಿದ್ದರು.

ಈಗ ಇದೇ ಟ್ವೀಟ್‌ ಇಟ್ಟುಕೊಂಡು ಕಾಂಗ್ರೆಸ್‌, ಪ್ರತಾಪ್‌ ಸಿಂಹ ಅವರಿಗೆ ಟಾಂಗ್‌ ನೀಡಿದೆ. ಮೂರ್ಖತನ ಮತ್ತು ಅವಿವೇಕತನನಕ್ಕೆ ಇನ್ನೊಂದು ಹೆಸರೇ ಪ್ರತಾಪ್‌ ಸಿಂಹ ಎಂದು ಗೇಲಿ ಮಾಡಿದೆ.

ಅಲ್ಲದೇ, ಪ್ರತಾಪ್‌ ಸಿಂಹ ಅವರೇ, ನಿಮಗೆ ಅರ್ಹತೆ ಇದೆಯೋ ಇಲ್ಲವೋ ಅಂತೂ ನೀವು ಸಂಸದರಾಗಿದ್ದೀರಿ. ಕಡೇ ಪಕ್ಷ ಆ ಜವಾಬ್ದಾರಿ ಅರಿತು ಮಾತನಾಡಿ. ಮಾತೆತ್ತಿದರೆ ಸಂಸ್ಕೃತಿ ಸಂಸ್ಕಾರದ ಪಾಠ ಮಾಡುವ ನಿಮಗೆ ಹಿಂದೂ ‘ಅವಿಭಕ್ತ’ ಕುಟುಂಬಗಳ ಪರಿಚಯ ಇಲ್ಲದಿರುವುದು ಆಶ್ಚರ್ಯವೇ ಸರಿ. ಅವಿಭಕ್ತ ಕುಟುಂಬಗಳು ನಿಮ್ಮ ಪ್ರಕಾರ ಹಿಂದೂಗಳಲ್ಲವೇ ? ಎಂದು ಪ್ರಶ್ನಿಸಿದೆ.

https://twitter.com/INCKarnataka/status/1648944094989942785

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read