ಮುಟ್ಟು ನಿಂತ ಮೇಲೆ ಮಹಿಳೆಯರು ಮಾಡಬೇಕು ಈ ಕೆಲಸ, ಇಲ್ಲದಿದ್ದರೆ ವಕ್ಕರಿಸಿಕೊಳ್ಳುತ್ತೆ ಕ್ಯಾನ್ಸರ್‌…..!

ಮಹಿಳೆಯರಿಗೆ ಸಾಮಾನ್ಯವಾಗಿ 45 ರಿಂದ 50 ವರ್ಷ ವಯಸ್ಸಿನಲ್ಲಿ ಮುಟ್ಟು ನಿಂತು ಹೋಗುತ್ತದೆ. ಇದನ್ನು ಮೆನೋಪಾಸ್ ಎಂದು ಕರೆಯುತ್ತೇವೆ. ಋತುಚಕ್ರ ಪ್ರತಿಯೊಬ್ಬ ಮಹಿಳೆಯ ಆರೋಗ್ಯಕರ ಜೀವನಶೈಲಿಯ ಸೂಚಕವಾಗಿದೆ. ಅದೇ ರೀತಿಯಲ್ಲಿ ಸರಿಯಾದ ಸಮಯದಲ್ಲಿ ಪಿರಿಯಡ್ಸ್ ನಿಲ್ಲುವುದು ಕೂಡ ದೈಹಿಕವಾಗಿ ಆರೋಗ್ಯವಾಗಿರುವುದನ್ನು ತೋರಿಸುತ್ತದೆ. ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಋತುಬಂಧದ ಸಮಯದಲ್ಲಿ  ಮಹಿಳೆಯರು ತಮ್ಮ ದೇಹದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು. ಮುಟ್ಟು ನಿಂತಾಗ ದೇಹದಲ್ಲಿ ಹಾರ್ಮೋನಿನ ಏರಿಳಿತಗಳು ಉಂಟಾಗುತ್ತವೆ. ಆ ಸಮಯದಲ್ಲಿ ಏನೆಲ್ಲಾ ಮಾಡಬೇಕು ಎಂಬುದನ್ನು ನೋಡೋಣ.  

ವೈದ್ಯಕೀಯ ತಪಾಸಣೆ ಪದೇ ಪದೇ ಆಸ್ಪತ್ರೆಗೆ ಹೋಗುವ ಸಂದರ್ಭ ಬರುವ ಮುನ್ನವೇ ಎಚ್ಚೆತ್ತುಕೊಳ್ಳಬೇಕು. ಜೀವನಶೈಲಿಯಲ್ಲಿ ಕೆಲವು ಸುಧಾರಣೆಗಳನ್ನು ಮಾಡಿಕೊಳ್ಳಬೇಕು. ದೇಹದಲ್ಲಿ ಬದಲಾವಣೆಗಳು ಆದಾಗ ಅವುಗಳ ಬಗ್ಗೆ ಗಮನ ಕೊಡಿ. ಅಗತ್ಯವೆನಿಸಿದರೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ.  

ಆಹಾರದ ಬಗ್ಗೆ ವಿಶೇಷ ಕಾಳಜಿ ಋತುಬಂಧದ ನಂತರ ಮಹಿಳೆಯರು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹೆಚ್ಚು ಫೈಬರ್, ಕ್ಯಾಲ್ಸಿಯಂ ಇರುವಂತಹ ಪದಾರ್ಥಗಳನ್ನು ಸೇವಿಸಿ. 30ರ ನಂತರ ಮಹಿಳೆಯರ ಮೂಳೆ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಸೊಪ್ಪು, ತರಕಾರಿಗಳು, ಹಣ್ಣುಗಳನ್ನು ತಿನ್ನಬೇಕು. ಕಡಿಮೆ ಉಪ್ಪು ಮತ್ತು ಸೋಡಿಯಂ ಸೇವನೆ ಮಾಡಿ. ಯಾಕೆಂದರೆ ಪಿರಿಯಡ್ಸ್ ನಿಂತ ಬಳಿಕ ದೇಹದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಹೆಚ್ಚಾಗತೊಡಗುತ್ತವೆ.

ಕ್ಯಾಲ್ಸಿಯಂ ತೆಗೆದುಕೊಳ್ಳಿ- ಮುಟ್ಟು ನಿಂತ ಬಳಿಕ ಆಹಾರದಲ್ಲಿ ಹೆಚ್ಚು ಹೆಚ್ಚು ಕ್ಯಾಲ್ಸಿಯಂ ಅನ್ನು ಸೇರಿಸಿ. ಋತುಬಂಧ ಸಮಯದಲ್ಲಿ ಕ್ಯಾಲ್ಸಿಯಂ ಬಹಳ ಮುಖ್ಯ. ಇದರಿಂದ ಮೂಳೆಗಳು ದುರ್ಬಲವಾಗುವುದಿಲ್ಲ. ಅದಕ್ಕಾಗಿಯೇ ಹೆಚ್ಚು ಹಾಲು, ಮೊಸರು, ಮೊಟ್ಟೆ ಮತ್ತು ಮೀನುಗಳನ್ನು ಸೇವಿಸಿ.

ವ್ಯಾಯಾಮ ಮತ್ತು ಯೋಗಕ್ಕಾಗಿ ಸಮಯ ಮೀಸಲಿಡಿ- ಅನೇಕ ಗೃಹಿಣಿಯರು ಆರೋಗ್ಯದ ಬಗ್ಗೆ ಗಮನ ಕೊಡುವುದೇ ಇಲ್ಲ. ಋತುಬಂಧದ ನಂತರ ಸಮಯ ಹೊಂದಿಸಿಕೊಂಡು ವ್ಯಾಯಾಮ ಮಾಡಬೇಕು. ಇದು ನಿಮಗೆ ಸಾಕಷ್ಟು ಪರಿಹಾರವನ್ನು ನೀಡುತ್ತದೆ. ಪಿರಿಯಡ್ಸ್ ನಿಂತ ಮೇಲೆ ಧ್ಯಾನ ಮತ್ತು ಯೋಗ ಉತ್ತಮ ಆರೋಗ್ಯಕ್ಕೆ ಕೀಲಿಕೈ ಇದ್ದಂತೆ. ಇದು ಒತ್ತಡ ಮತ್ತು ಉದ್ವೇಗವನ್ನು ಕಡಿಮೆ ಮಾಡಿ, ಮೆದುಳಿನ ಶಕ್ತಿ ಹೆಚ್ಚಿಸುತ್ತದೆ.

ಮುಟ್ಟು ನಿಂತ ಬಳಿಕ ಅಂಡಾಶಯದ ಕ್ಯಾನ್ಸರ್ ಅಪಾಯ

ಮಹಿಳೆಯರಿಗೆ ಋತುಬಂಧದ ಬಳಿಕ ಅಂಡಾಶಯದ ಕ್ಯಾನ್ಸರ್‌ ಅಪಾಯ ಹೆಚ್ಚಾಗುತ್ತದೆ. ಅಂಡಾಶಯದಲ್ಲಿ ಪ್ರಾರಂಭವಾಗಿ ಇದು ನಂತರ ದೇಹದ ಇತರ ಭಾಗಗಳಿಗೆ ಹರಡುತ್ತದೆ. ಅಂಡಾಶಯದ ಕ್ಯಾನ್ಸರ್ ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ಈ ರೋಗವು 50 ವರ್ಷ ವಯಸ್ಸಿನ ಮಹಿಳೆಯರಲ್ಲಿ ತುಂಬಾ ಸಾಮಾನ್ಯವಾಗಿದೆ. ‘ಅಮೆರಿಕನ್ ಕ್ಯಾನ್ಸರ್ ಸೊಸೈಟಿ’ ಪ್ರಕಾರ, ಅಂಡಾಶಯದ ಕ್ಯಾನ್ಸರ್‌ನ ಅರ್ಧದಷ್ಟು ಪ್ರಕರಣಗಳು 63 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಲ್ಲಿ ಕಂಡುಬರುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read