ಮಾನಸಿಕ ಕಿರಿಕಿರಿ ಹೆಚ್ಚಿಸುತ್ತೆ ಟೈಮ್ ಪಾಸ್ ಗಾಗಿ ಬಳಕೆ ಮಾಡುವ ʼಮೊಬೈಲ್ʼ

ಕೆಲಸ ಕಾರಣಕ್ಕೆ ಮೊಬೈಲ್ ನೋಡುತ್ತಿದ್ದರೆ ಸರಿ, ಅದರ ಬದಲು ಟೈಮ್ ಪಾಸ್ ಮಾಡಲು ಅಥವಾ ರೆಸ್ಟ್ ಸಿಗಲೆಂದು ಸ್ಮಾರ್ಟ್ ಫೋನ್ ಬಳಸುತ್ತಿದ್ದರೆ ಮೊದಲು ಅದನ್ನು ಬಿಟ್ಟುಬಿಡಿ. ಇದರಿಂದ ನಿಮ್ಮ ಮನಸ್ಸಿನ ಕಿರಿಕಿರಿ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ.

ಮಾನಸಿಕ ಆರೋಗ್ಯದ ಸಾಮಾನ್ಯ ಮಟ್ಟಕ್ಕಿಂತ ಕೆಳಗಿರುವವರು, ನಕಾರಾತ್ಮಕ ಭಾವನೆ ಹೆಚ್ಚಿರುವವರು, ಬೇಗ ಸಿಟ್ಟು ಮಾಡಿಕೊಳ್ಳುವವರು, ಸದಾ ದುಖಿತರಾಗಿರುವವರು ವಿಶ್ರಾಂತಿ ಎಂಬ ನೆಪವೊಡ್ಡಿ ಸ್ಮಾರ್ಟ್ ಫೋನ್ ನೋಡುತ್ತಾರೆ. ಇದರಿಂದ ಮಾನಸಿಕ ಕಿರಿಕಿರಿ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ ಎಂಬುದು ಅವರಿಗೂ ತಿಳಿಯುವುದಿಲ್ಲ.

ಸ್ಮಾರ್ಟ್ ಫೋನ್ ಬಳಸುವುದೇ ತಪ್ಪಲ್ಲ. ಕರೆ, ಸಂದೇಶ, ಅನಿವಾರ್ಯ ಕಚೇರಿ ಕೆಲಸಗಳಿಗಾಗಿ ಸ್ಮಾರ್ಟ್ ಫೋನ್ ಬೇಕೇ ಬೇಕು. ಅದರ ಬಳಕೆ ನಿಯಂತ್ರಣದಲ್ಲಿರುವುದು ಬಹಳ ಮುಖ್ಯ.

ಸಾಮಾಜಿಕ ಜಾಲತಾಣಗಳಿಗೆ ವಿಪರೀತ ಎಡಿಕ್ಟ್ ಆಗುವುದು, ಇತರರು ಏನು ಮಾಡುತ್ತಾರೆ ಎಂಬುದನ್ನು ಗಮನಿಸುವುದು, ಅವರನ್ನು ಫಾಲೋ ಮಾಡುವುದು ಇವೆಲ್ಲಾ ಉತ್ತಮ ಮಾನಸಿಕ ಆರೋಗ್ಯದ ಲಕ್ಷಣಗಳಲ್ಲ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read