ಬೆಂಗಳೂರು : ಮಾಜಿ ಸಿಎಂ ಬೊಮ್ಮಾಯಿಗೆ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡುವ ಮೂಲಕ ಸಚಿವ ಎಂ.ಬಿ ಪಾಟೀಲ್ ಲೇವಡಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಎಂಬಿ ಪಾಟೀಲ್ ‘ಶೀಘ್ರದಲ್ಲೇ ವಿಪಕ್ಷ ನಾಯಕರಾಗಲಿರುವ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಅಭಿನಂದನೆಗಳು. ಬಿಜೆಪಿ ಬಸವರಾಜ ಬೊಮ್ಮಾಯಿಯನ್ನು ಮೂಲೆಗುಂಪು ಮಾಡಲು ನಿರ್ಧರಿಸಿದಂತಿದೆ. ಬೊಮ್ಮಾಯಿಯವರಿಗೂ ಜಗದೀಶ್ ಶೆಟ್ಟರ್ ಅವರಿಗೆ ಬಂದಂತಹ ಪರಿಸ್ಥಿತಿಯೇ ಬರಲಿದೆ. ಬಿಜೆಪಿ ಎಂಬುದು ಕುಸಿಯುತ್ತಿರುವ ಕಾರ್ಡ್ ಗಳ ಮನೆಯಾಗಿದೆ. ಬೊಮ್ಮಾಯಿಯವರು ಕಾಂಗ್ರೆಸ್ ಸೇರುವ ಬಗ್ಗೆ ಯೋಚಿಸಬೇಕು. ಅವರು ಈ ಹಿಂದಿನಂತೆ ಹಾಗೂ ಹಿರಿಯ ಬೊಮ್ಮಾಯಿಯವರಂತೆ ಜಾತ್ಯಾತೀತ ಸಿದ್ಧಾಂತಕ್ಕೆ ಮರಳಿದರೆ ಕಾಂಗ್ರೆಸ್ ಹೈಕಮಾಂಡ್ ಪರಿಗಣಿಸಬಹುದು’ ಎಂದು ಸಚಿವ ಎಂ.ಬಿ ಪಾಟೀಲ್ ಲೇವಡಿ ಮಾಡಿದ್ದಾರೆ.
ಶೀಘ್ರದಲ್ಲೇ ವಿಪಕ್ಷ ನಾಯಕರಾಗಲಿರುವ ಶ್ರೀ @hd_kumaraswamy ಅವರಿಗೆ ಅಭಿನಂದನೆಗಳು.
ಅಂತಿಮವಾಗಿ @BJP4Karnatakaವು ಶ್ರೀ @BSBommai ಅವರನ್ನು ಮೂಲೆಗುಂಪು ಮಾಡಲು ನಿರ್ಧರಿಸಿದಂತಿದೆ.
ಬೊಮ್ಮಾಯಿಯವರಿಗೂ ಸಹ ಶ್ರೀ @BSYBJP, ಶ್ರೀ @JagadishShettar ಅವರಿಗೆ ಬಂದಂತಹ ಪರಿಸ್ಥಿತಿಯೇ ಬರಲಿದೆ.
ಬಿಜೆಪಿ ಎಂಬುದು ಕುಸಿಯುತ್ತಿರುವ… pic.twitter.com/ZlchqdhNX1
— M B Patil (@MBPatil) July 17, 2023