ಮಹಿಳೆ ತೊಡುವ ʼಬಳೆʼ ಹಿಂದಿದೆ ಈ ಸತ್ಯ

ಬಹುತೇಕ ಮಹಿಳೆಯರು ಬಳೆಯನ್ನು ಅವಶ್ಯಕವಾಗಿ ಧರಿಸ್ತಾರೆ. ಗಾಜಿನ ಬಳೆ ಸುಮಂಗಲಿಯ ಸಂಕೇತ ಎಂದು ನಂಬಲಾಗಿದೆ. ಆದ್ರೆ ಈ ನಂಬಿಕೆ, ಪರಂಪರೆ ಹಿಂದೆ ಅನೇಕ ಲಾಭಗಳಿವೆ.

ಪುರುಷರಿಗಿಂತ ಮಹಿಳೆಯರ ದೇಹ ಸೂಕ್ಷ್ಮ. ಅವರ ಮೂಳೆಗಳು ಕೂಡ ಪುರುಷರ ಮೂಳೆಗಿಂತ ಸೂಕ್ಷ್ಮವಾಗಿರುತ್ತವೆ. ಕೈಗೆ ಬಳೆ ಧರಿಸುವುದ್ರಿಂದ ಮೂಳೆಗಳು ಬಲ ಪಡೆಯುತ್ತವೆ.

ಕೆಲ ಮಹಿಳೆಯರು ಬೆಳ್ಳಿ ಅಥವಾ ಬಂಗಾರದ ಬಳೆ ಧರಿಸ್ತಾರೆ. ಚಿನ್ನ ಹಾಗೂ ಬೆಳ್ಳಿ ಸದಾ ನಮ್ಮ ದೇಹದ ಸಂಪರ್ಕಕ್ಕೆ ಬರುವುದ್ರಿಂದ ನಮ್ಮ ದೇಹಕ್ಕೆ ಈ ಧಾತುಗಳು ಸೇರುತ್ತವೆ.

ಆಯುರ್ವೇದದ ಪ್ರಕಾರ ಬೆಳ್ಳಿ-ಬಂಗಾರದ ಧಾತು ದೇಹಕ್ಕೆ ಶಕ್ತಿ ನೀಡುತ್ತದೆ. ಧಾತುವಿನ ಶಕ್ತಿಶಾಲಿ ತತ್ವ ನಮ್ಮ ದೇಹ ಪ್ರವೇಶ ಮಾಡುತ್ತದೆ. ಇದ್ರಿಂದ ಮಹಿಳೆಯರ ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ. ದೀರ್ಘಕಾಲ ಆರೋಗ್ಯವಾಗಿರಲು ನೆರವಾಗುತ್ತದೆ.

ಮನೆಯಲ್ಲಿ ಕೆಲಸ ಮಾಡುವ ಮಹಿಳೆಯರ ಬಳೆ ಸದ್ದು ಇಡೀ ಮನೆಯನ್ನು ಆವರಿಸುತ್ತದೆ. ಇದ್ರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ನಿರ್ನಾಮವಾಗಿ ಸಕಾರಾತ್ಮಕ ಶಕ್ತಿ ಮನೆಯಲ್ಲಿ ಸದಾ ನೆಲೆಸಿರುತ್ತದೆ.

ಮಹಿಳೆ ಬಳೆ ಧರಿಸಿದ್ರೆ ಪತಿಯ ಆಯಸ್ಸು ವೃದ್ಧಿಯಾಗಲಿದೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ಹಾಗಾಗಿ ಮದುವೆಯಾದ ಮಹಿಳೆ ಸದಾ ಒಂದಾದ್ರೂ ಬಳೆ ಧರಿಸ್ತಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read