ಮಹಿಳೆಯರಿಗೆ ಯುಗಾದಿ ಗಿಫ್ಟ್ ನೀಡಲು ಯೋಗೇಶ್ವರ್ ಸಿದ್ಧತೆ; 50,000 ಸೀರೆಗಳ ವಿತರಣೆ

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗಿಲ್ಲವಾದರೂ ಸಹ ಮತದಾರರ ಸೆಳೆಯುವ ಕಸರತ್ತಿನಲ್ಲಿ ಅಭ್ಯರ್ಥಿಗಳು ಮುಂದಾಗಿದ್ದಾರೆ. ಕೆಲವೊಂದು ಕ್ಷೇತ್ರಗಳಲ್ಲಿ ಈಗಾಗಲೇ ಕುಕ್ಕರ್ ವಿತರಣೆಯಾಗಿದ್ದು, ಇದೀಗ ಮತ್ತೊಂದು ಕ್ಷೇತ್ರದ ಜನತೆಗೆ ಗಿಫ್ಟ್ ಸಿಗುತ್ತಿದೆ.

ಹೌದು, ಚನ್ನಪಟ್ಟಣ ಕ್ಷೇತ್ರದಿಂದ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಯುಗಾದಿ ಉಡುಗೊರೆಯಾಗಿ ತಮ್ಮ  ಕ್ಷೇತ್ರದ ಮಹಿಳೆಯರಿಗೆ ಸೀರೆ ನೀಡುತ್ತಿದ್ದು ಈಗಾಗಲೇ 50,000 ಸೀರೆಗಳ ಪ್ಯಾಕ್ ಸಿದ್ಧವಾಗಿದೆ ಎಂದು ತಿಳಿದುಬಂದಿದೆ.

ಸೀರೆ ಪ್ಯಾಕ್ ಮೇಲೆ ‘ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ’ ಎಂದು ಮುದ್ರಿಸಲಾಗಿದ್ದು, ಶೀಘ್ರದಲ್ಲಿಯೇ ಕಾರ್ಯಕರ್ತರು ಮನೆಮನೆಗಳಿಗೆ ತೆರಳಿ ಇದನ್ನು ವಿತರಿಸಲಿದ್ದಾರೆ ಎನ್ನಲಾಗಿದೆ. 1999ರಲ್ಲಿ ಪಕ್ಷೇತರರಾಗಿ ಚನ್ನಪಟ್ಟಣದಿಂದ ಕಣಕ್ಕಿಳಿದಿದ್ದ ಯೋಗೇಶ್ವರ್ ಆಗಲೂ ಸಹ ಸೀರೆಯನ್ನು ಹಂಚಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read