ಮಳೆಯಲ್ಲಿ ನೆನೆಯಲು ಹಿಂಜರಿಯಬೇಡಿ; ‘ಮಳೆ ಸ್ನಾನ’ ದಿಂದ ದೇಹಕ್ಕೆ ಸಿಗುತ್ತೆ ಅದ್ಭುತ ಪ್ರಯೋಜನ…!

ಉತ್ತರ ಭಾರತದ ಎಲ್ಲಾ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕೆಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮನೆಗಳಿಗೆ, ತಗ್ಗು ಪ್ರದೇಶಗಳಿಗೆಲ್ಲ ನೀರು ನುಗ್ಗಿದ್ದು ಜನಜೀವನ ದುಸ್ತರವಾಗಿದೆ. ಈ ಪ್ರಕೃತಿ ವಿಕೋಪವನ್ನು ನೋಡಿದಾಗ ಮಳೆ ಬರೀ ಅನಾಹುತವನ್ನೇ ತರುತ್ತಿದೆ ಎನಿಸುವುದು ಸಹಜ. ಆದರೆ ಮಳೆಯಿಂದ ಅನೇಕ ಅನುಕೂಲಗಳಿವೆ. ಮೊದಲ ಮಳೆಯಲ್ಲಿ ನೆನೆಯಲು ಎಲ್ಲರೂ ಇಷ್ಟಪಡುತ್ತಾರೆ. ಮಳೆನೀರಲ್ಲಿ ಸ್ನಾನ ಮಾಡುವುದು ಕೂಡ ಒಂದು ಟ್ರೆಂಡ್‌.

ಆದರೆ ನೆಗಡಿ, ಜ್ವರ ಹಾಗೂ ಇತರ ವೈರಲ್‌ ಕಾಯಿಲೆಗಳ ಭಯದಿಂದ ಅನೇಕರು ಮಳೆಯಲ್ಲಿ ನೆನೆಯಲು ಹಿಂದೇಟು ಹಾಕಬಹುದು. ಮಳೆಸ್ನಾನ ಕೇವಲ ಮೋಜಿಗಲ್ಲ, ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಮಳೆಯಲ್ಲಿ ಸ್ನಾನ ಮಾಡುವುದರಿಂದ ದೇಹದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅನೇಕ ಖನಿಜಗಳು ಮಳೆ ನೀರಿನಲ್ಲಿರುತ್ತವೆ. ಹಾಗಾಗಿ ಇದು ನಮಗೆ ಪ್ರಯೋಜನಕಾರಿ.

ಮಳೆನೀರಲ್ಲಿರುವ ಅಲ್ಕಾಲೈನ್ ಪಿಎಫ್ ಕೂದಲನ್ನು ಬಲಪಡಿಸುತ್ತದೆ. ಕೂದಲಿನ ಮಂದತೆಯನ್ನು ಸಹ ಹೋಗಲಾಡಿಸುತ್ತದೆ. ಮಳೆಯಲ್ಲಿ ನೆನೆಯುವುದು ಕೂದಲಿಗೆ ಮಾತ್ರವಲ್ಲ, ಚರ್ಮಕ್ಕೂ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಚರ್ಮದ ತೇವಾಂಶವನ್ನು ಕಾಪಾಡುತ್ತದೆ ಮತ್ತು ದೇಹದ ಮೇಲೆ ಅಂಟಿಕೊಂಡಿರುವ ಕೊಳೆಯನ್ನು ಸುಲಭವಾಗಿ ತೆಗೆದುಹಾಕುತ್ತದೆ.

ಮಳೆಯಲ್ಲಿ ಸ್ನಾನ ಮಾಡುವಾಗ ದೇಹದಲ್ಲಿ ಸಿರೊಟೋನಿನ್ ಮತ್ತು ಎಂಡಾರ್ಫಿನ್ ಎಂಬ ಹಾರ್ಮೋನ್‌ಗಳು ಬಿಡುಗಡೆಯಾಗುತ್ತವೆ. ಈ ಹಾರ್ಮೋನುಗಳು ಒತ್ತಡ ಮತ್ತು ಆತಂಕವನ್ನು ಹೋಗಲಾಡಿಸಲು ಸಹಾಯ ಮಾಡುತ್ತವೆ. ಇದರ ಹೊರತಾಗಿ ಮಳೆಯಲ್ಲಿ ನೆನೆಯುವುದರಿಂದ ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ಸಿಗುತ್ತದೆ. ಹಾರ್ಮೋನ್ ಅಸಮತೋಲನದ ಸಮಸ್ಯೆ ಇರುವವರು ಮಳೆಯಲ್ಲಿ ನೆನೆಯಬೇಕು.

ಆದರೆ ಋತುವಿನ ಮೊದಲ ಅಥವಾ ಎರಡನೇ ಮಳೆಯಲ್ಲಿ ನೆನೆಯಬಾರದು. ಏಕೆಂದರೆ ಇದು ತುಂಬಾ ಕಲುಷಿತವಾಗಿರುತ್ತದೆ. ಇದರಿಂದ ಚರ್ಮದ ಸಮಸ್ಯೆಗಳು ಉಂಟಾಗಬಹುದು. ಹೆಚ್ಚು ಹೊತ್ತು ಮಳೆಯಲ್ಲಿ ಸ್ನಾನ ಮಾಡಬೇಡಿ. ಇದರಿಂದ ಅನಾರೋಗ್ಯಕ್ಕೆ ತುತ್ತಾಗುವ ಅಪಾಯವಿರುತ್ತದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read