ಮನೆಯಲ್ಲೇ ಮಾಡಿ ಸವಿಯಿರಿ ರೆಸ್ಟೋರೆಂಟ್​ ಶೈಲಿಯ ವೆಜ್​ ಫ್ರೈಡ್​ ರೈಸ್​​

ಬೇಕಾಗುವ ಸಾಮಗ್ರಿ:  1 ಕಪ್​ ಸಣ್ಣಗೆ ಹೆಚ್ಚಿದ ಕ್ಯಾಬೇಜ್​, ಬೀನ್ಸ್, ಕ್ಯಾರೇಟ್​, ದೊಡ್ಡ ಮೆಣಸು,  2 ಈರುಳ್ಳಿ, 1/2 ಚಮಚ ಕಾಳು ಮೆಣಸು ಪುಡಿ, 1/2 ಚಮಚ ಚಿಲ್ಲಿ ಸಾಸ್, 2 ಹಸಿ ಮೆಣಸು, 1 ಚಮಚ ಸೋಯಾ ಸಾಸ್​, ಉಪ್ಪು ಹಾಗೂ ಅಡುಗೆ ಎಣ್ಣೆ

ಮಾಡುವ ವಿಧಾನ: ಒಂದು ಪಾತ್ರೆಗೆ ಅಡುಗೆ ಎಣ್ಣೆಯನ್ನ ಹಾಕಿ. ಇದಕ್ಕೆ ಸಣ್ಣಗೆ ಹೆಚ್ಚಿದ ಕ್ಯಾಬೇಜ್​, ಬೀನ್ಸ್, ಕ್ಯಾರೇಟ್​ಗಳನ್ನ ಹಾಕಿ ಒಂದತ್ತು ನಿಮಿಷ ಹುರಿಯಿರಿ. ಇದಾದ ಮೇಲೆ ಈರುಳ್ಳಿ, ದೊಡ್ಡ ಮೆಣಸು, ಮೆಣಸನ್ನ ಹಾಕಿ ಇನ್ನೊಮ್ಮೆ ಹುರಿಯಿರಿ. ತರಕಾರಿ ಬೇಯುವಾಗಲೇ ಸ್ವಲ್ಪ ಉಪ್ಪನ್ನ ಹಾಕಿ. ಇದಕ್ಕೆ ಸೋಯಾ ಸಾಸ್​ ಹಾಗೂ ಚಿಲ್ಲಿ ಸಾಸ್​ ಹಾಕಿ. ಬಳಿಕ ಈ ಗ್ರೇವಿಗೆ ಅನ್ನವನ್ನ ಹಾಕಿ.

ಇದಾದ ಮೇಲೆ ಕಾಳು ಮೆಣಸಿನ ಪುಡಿ, ರುಚಿಗೆ ಬೇಕು ಅಂದರೆ ಉಪ್ಪನ್ನ ಹಾಕಿ. ಕೊನೆಯಲ್ಲಿ ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪನ್ನ ಹಾಕಿದರೆ ರೆಸ್ಟಾರೆಂಟ್​ ಶೈಲಿಯ ವೆಜ್​ ಫ್ರೈಡ್​ ರೈಸ್​ ಸವಿಯಲು ಸಿದ್ಧ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read