ಬೆಳ್ಳಿ ಅಸಲಿಯೋ ನಕಲಿಯೊ ಹೀಗೆ ಪರೀಕ್ಷಿಸಿ

ಬಂಗಾರದಂತೆ ಬೆಳ್ಳಿಯನ್ನೂ ಅಸಲಿಯೋ ನಕಲಿಯೋ ಎಂದು ಪರೀಕ್ಷೆ ಮಾಡಬಹುದು. ಈ ಕೆಳಗಿನ ವಿಧಾನ ಅನುಸರಿಸಿ ಇದರಿಂದ ನೀವು ಪ್ರೀತಿಯಿಂದ ಕೊಂಡ ಬೆಳ್ಳಿಯ ಅಸಲಿತನವನ್ನು ಕಂಡುಹಿಡಿಯಬಹುದು.

ನೀವು ಕೊಂಡ ಬೆಳ್ಳಿಯ ವಸ್ತು ಸಮತಟ್ಟಾದ ಮೇಲ್ಭಾಗವನ್ನು ಹೊಂದಿದ್ದರೆ ಅದರ ಮೇಲೆ ಐಸ್ ಕ್ಯೂಬ್ ಇಡಿ. ತಕ್ಷಣವೇ ಅದು ಕರಗಿ ನೀರಾದರೆ ನಿಮ್ಮ ಬೆಳ್ಳಿ ಅಸಲಿ ಎಂದಾಗುತ್ತದೆ. ಏಕೆಂದರೆ ಬೆಳ್ಳಿ ಉಷ್ಣವಾಹಕವಾದ್ದರಿಂದ ಇದರ ಮೇಲೆ ಇಟ್ಟ ಐಸ್ ತಕ್ಷಣ ಕರಗಲೇಬೇಕು.

ಬೆಳ್ಳಿಯ ವಸ್ತುವಿನ ಮೇಲೆ ಒಂದು ಹನಿ ಬ್ಲೀಚಿಂಗ್ ಹಾಕಿದಾಗ ಬೆಳ್ಳಿ ತನ್ನ ಬಣ್ಣ ಬದಲಾಯಿಸಿ ಕಂದು ಬಣ್ಣಕ್ಕೆ ತಿರುಗಿದರೂ ನಿಮ್ಮ ಬೆಳ್ಳಿ ಅಸಲಿ ಎಂದು ನಂಬಬಹುದು.

ಅಯಸ್ಕಾಂತವನ್ನು ಬೆಳ್ಳಿಯ ಬಳಿ ತಂದು ನೋಡಿ. ಆಗ ಅದು ಆಕರ್ಷಿತವಾದರೆ ಆ ಬೆಳ್ಳಿಯೊಂದಿಗೆ ಇತರ ವಸ್ತುಗಳೂ ಬೆರೆತಿವೆ ಎಂದರ್ಥ. ಅಂದರೆ ಆ ಬೆಳ್ಳಿ ನಕಲಿಯಾಗಿರಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read