ಮನೆಯಲ್ಲಿ ಸಕಾರಾತ್ಮಕತೆ ನೆಲೆಸಲು ಟ್ರೈ ಮಾಡಿ ಈ ಟಿಪ್ಸ್

ನೆಗಟಿವ್ ಎನರ್ಜಿಗಳು ಕಣ್ಣಿಗೆ ಕಾಣಿಸಿಕೊಳ್ಳುವುದಿಲ್ಲ. ಆದರೆ ಅವು ಒಂದಲ್ಲ ಒಂದು ರೂಪದಲ್ಲಿ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಮನೆಯಲ್ಲಿ ಏನೇ ಮಾಡಿದರೂ ಅಭಿವೃದ್ದಿ ಆಗದೇ ಇರುವುದು, ಸದಾ ಜಗಳವಾಗುವುದು ನೆಮ್ಮದಿ ಇಲ್ಲದೇ ಇರುವುದು ಜೊತೆಗೆ ಆರ್ಥಿಕ ಸಮಸ್ಯೆಗಳು, ಆರೋಗ್ಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಆಗಾಗ ಕಂಡು ಬರುತ್ತದೆ.

ಇದರ ಜೊತೆಗೆ ಮನಸ್ಸಿನ ನೆಮ್ಮದಿ ಕೂಡ ಹಾಳಾಗುತ್ತದೆ. ನಮಗೆ ಗೊತ್ತಿಲ್ಲದೇ ನೆಗಟಿವ್ ಎನರ್ಜಿಗಳು ನಮ್ಮ ಮನೆಯೊಳಗೆ ಪ್ರವೇಶಿಸಿರುತ್ತವೆ. ಇದನ್ನು ಸುಲಭವಾಗಿ ನಿವಾರಿಸಲು ಈ ವಿಧಾನ ಅನುಸರಿಸಿ. ಉಪ್ಪು, ವಿನೇಗರ್, ನೀರಿನಿಂದ ಈ ನೆಗೆಟಿವ್ ಎನರ್ಜಿಯನ್ನು ಸುಲಭವಾಗಿ ದೂರ ಮಾಡಬಹುದು.

1 ಗ್ಲಾಸ್ ತೆಗೆದುಕೊಂಡು ಅದಕ್ಕೆ ಕಾಲು ಭಾಗದಷ್ಟು ಉಪ್ಪು ಹಾಕಿ ನಂತರ ¼ ಟೀ ಸ್ಪೂನ್ ವಿನೇಗರ್ ಸೇರಿಸಿ, ಶುದ್ಧವಾದ ನೀರನ್ನು ಗ್ಲಾಸ್ ತುಂಬುವಷ್ಟು ಹಾಕಿ. ನಂತರ ಈ ಗ್ಲಾಸ್ ಅನ್ನು ನೀವು ಹೆಚ್ಚು ಹೊತ್ತು ಕಳೆಯುವ ಜಾಗದಲ್ಲಿ ಹಾಗೂ ಜನರು ನಿಮ್ಮನ್ನು ಭೇಟಿಯಾಗುವ ಮನೆಯ ಜಾಗದಲ್ಲಿ 24 ಗಂಟೆಗಳ ಕಾಲ ಇಡಿ. ಹೀಗೆ ಮಾಡುವುದರಿಂದ ಇದು ನೆಗಟಿವ್ ಎನರ್ಜಿಗಳನ್ನು ಎಳೆದುಕೊಳ್ಳುತ್ತದೆ ಎನ್ನುತ್ತಾರೆ ಜೋತಿಷ್ಯ ಪಂಡಿತರು.

ಇದರ ಜೊತೆ ಮನೆಯಲ್ಲಿ ಸಂಜೆ ಹೊತ್ತು ಭಜನೆ ಮಾಡುವುದು, ದೇವರಿಗೆ ನಿತ್ಯ ಪೂಜೆ ಮಾಡುವುದನ್ನು ಮಾಡುತ್ತಿರಿ. ಆದಷ್ಟು ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ಮನೆಯವರೊಂದಿಗೆ ಚೆನ್ನಾಗಿ ಬೆರೆಯಿರಿ. ಮನೆಯಲ್ಲಿ ನಗು, ಸಂತೋಷ ತುಂಬಿದ್ದರೆ ನಮ್ಮ ಯೋಚನೆಗಳು ಸಕಾರಾತ್ಮಕವಾಗಿವಾಗಿದ್ದರೆ ಬದುಕು ಸುಂದರವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read