ಮನೆಯಲ್ಲಿ ‘ಶಂಖ’ ಇಡುವುದರಿಂದ ಏನಾಗುತ್ತೆ ಗೊತ್ತಾ…..?

ಹಿಂದೂ ಧರ್ಮದಲ್ಲಿ ಶಂಖಕ್ಕೆ ಬಹಳ ಪ್ರಾಮುಖ್ಯತೆ ಇದೆ. ಪೂಜೆಯ ಸಮಯದಲ್ಲಿ ಶಂಖವನ್ನು ಊದುವ ರೂಢಿಯಿದೆ. ಇದರ ಧ್ವನಿಯಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ಶಂಖ ನಮ್ಮ ಆರೋಗ್ಯ, ಧನ ಮುಂತಾದವುಗಳ ಮೇಲೂ ಧನಾತ್ಮಕ ಪ್ರಭಾವ ಬೀರುತ್ತದೆ.

ಶಂಖವನ್ನು ವಿಷ್ಣು ಮತ್ತು ದೇವಿ ಲಕ್ಷ್ಮಿ ಇಬ್ಬರೂ ಧರಿಸುತ್ತಾರೆ. ಹಾಗಾಗಿ ಶಂಖ ಇರುವ ಮನೆಯಲ್ಲಿ ಈ ದೇವತೆಗಳ ಕೃಪೆ ಇರುತ್ತದೆ ಎಂದು ನಂಬಲಾಗಿದೆ. ಶುಕ್ರವಾರದ ದಿನ ಲಕ್ಷ್ಮಿಯನ್ನು ಪೂಜಿಸಿ ಶಂಖ ಊದಿದರೆ ಮನೆಯಲ್ಲಿ ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆಯಿದೆ.

ಶಂಖದಲ್ಲಿ ನೀರು ತುಂಬಿಕೊಂಡು ಶಿವಲಿಂಗ ಮತ್ತು ಲಕ್ಷ್ಮಿಗೆ ಅಭಿಷೇಕ ಮಾಡುವುದರಿಂದ ಆಸೆಗಳು ಈಡೇರುತ್ತವೆ. ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎನ್ನಿಸಿದ್ರೆ, ಶಂಖದ ನೀರನ್ನು ಮನೆಗೆ ಚಿಮುಕಿಸಬೇಕು.

ಶಂಖವನ್ನು ಊದುವುದರಿಂದ ಶ್ವಾಸಕೋಶ ಗಟ್ಟಿಯಾಗುತ್ತದೆ. ಅಸ್ತಮಾ ರೋಗಿಗಳು ಪ್ರತಿನಿತ್ಯ ಶಂಖ ಊದುವುದರಿಂದ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಮೂಳೆಗಳ ಸಮಸ್ಯೆ ಇರುವವರು ಶಂಖದ ನೀರನ್ನು ಕುಡಿಯಬೇಕು. ಇದರಲ್ಲಿರುವ ಕ್ಯಾಲ್ಸಿಯಮ್, ಫಾಸ್ಪರಸ್ ಮತ್ತು ಗಂಧಕದ ಅಂಶವು ಮೂಳೆಯನ್ನು ಗಟ್ಟಿಮಾಡುತ್ತದೆ. ವಾಸ್ತದೋಷ ನಿವಾರಣೆಗೂ ಶಂಖ ಪ್ರಯೋಜನಕಾರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read