ಮನೆಯಲ್ಲಿರುವವರ ʼಶುಭ-ಅಶುಭʼಕ್ಕೆ ಕಾರಣವಾಗುತ್ತೆ ಮನೆ ಮುಂದಿರುವ ಗಿಡ

ಮನೆಯ ಸೌಂದರ್ಯ ಹೆಚ್ಚಿಸಲು ಮನೆ ಮುಂದೆ ಅನೇಕ ಗಿಡ-ಮರಗಳನ್ನು ಬೆಳೆಸುತ್ತಾರೆ. ಆದ್ರೆ ಸೌಂದರ್ಯದ ಹೆಸರಿನಲ್ಲಿ ಮನೆ ಮುಂದೆ ಹಾಕುವ ಕೆಲವೊಂದು ಗಿಡ ಅನೇಕ ದೋಷಗಳಿಗೆ ಕಾರಣವಾಗುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಕೆಲವೊಂದು ಗಿಡಗಳನ್ನು ಮನೆ ಮುಂದೆ ಹಾಕಬಾರದು.

ಮುಳ್ಳಿನ ಗಿಡಗಳು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಹಾಗಾಗಿ ಮನೆ ಮುಂದೆ ಮುಳ್ಳಿನ ಗಿಡವನ್ನು ಹಾಕಬಾರದು. ಇದ್ರಿಂದ ಕುಟುಂಬಸ್ಥರು ಸದಾ ಕಷ್ಟ ಎದುರಿಸಬೇಕಾಗುತ್ತದೆ.

ಗುಲಾಬಿ ಹಾಗೂ ಮಲ್ಲಿಗೆ ಹೂವಿನ ಗಿಡಗಳು ಮನೆಯ ಮುಂದಿದ್ರೆ ಒಳ್ಳೆಯದು. ಇದು ಮನಸ್ಸಿನ ಒತ್ತಡ ಕಡಿಮೆ ಮಾಡುವ ಕೆಲಸ ಮಾಡುತ್ತದೆ.

ಮನೆಯಲ್ಲಿ ಮನಿ ಪ್ಲಾಂಟ್ ತಂದಿಡಿ. ಇದು ಮನೆಯಲ್ಲಿದ್ದರೆ ಧನ ಲಾಭವಾಗುತ್ತದೆ.

ಅಶ್ವತ್ಥ ಮರದಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ. ಆದ್ರೆ ಮನೆ ಮುಂದೆ ಅಶ್ವತ್ಥ ಮರವಿರುವುದು ಒಳ್ಳೆಯದಲ್ಲ. ಮನೆ ಮುಂದೆ ಅಶ್ವತ್ಥ ಮರವಿದ್ದರೆ ಅದಕ್ಕೆ ಪೂಜೆ ಮಾಡಿ ಬೇರೆ ಕಡೆ ಗಿಡ ನೆಡಿ.

ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಮಹತ್ವವಿದೆ. ತುಳಸಿ ಗಿಡ ಧಾರ್ಮಿಕ ಹಾಗೂ ಪವಿತ್ರವಾಗಿರುತ್ತದೆ. ಇದ್ರಲ್ಲಿ ಔಷಧಿ ಗುಣವಿರುತ್ತದೆ. ಹಾಗಾಗಿ ಇದನ್ನು ಅವಶ್ಯವಾಗಿ ಮನೆ ಮುಂದಿಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read