ಮನೆಗೆಲಸದವರ ಟ್ರಿಪ್‌ ಗೆ ಬೋನಸ್ – ಹೆಲಿಕಾಪ್ಟರ್‌ ನೀಡಿದ ಉದ್ಯಮಿ…!

ಬೋನಸ್ ಎಂದರೆ ನಮ್ಮಲ್ಲಿ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ಒಂದು ವೇಳೆ ನಿಮ್ಮ ಬಾಸ್ ನಿಮಗೆ ನಿಮ್ಮ ಕುಟುಂಬದೊಂದಿಗೆ ಎಂಜಾಯ್ ಮಾಡಲೆಂದು ದೊಡ್ಡ ಮೊತ್ತವನ್ನು ಕೊಟ್ಟರೆ ಹೇಗೆ? ಇಂಥದ್ದೇ ಒಂದು ಘಟನೆ ಮಲೇಷ್ಯಾದ ಮೂವರು ಮನೆಗೆಲಸದವರ ವಿಚಾರದಲ್ಲಿ ಜರುಗಿದೆ.

ಜವಳಿ ಉದ್ಯಮಿ ಫರಾಹ್ ವೆನ್ ಟಿಕ್‌ಟಾಕ್‌ನಲ್ಲಿ ವಿಡಿಯೋವೊಂದನ್ನು ಶೇರ್‌ ಮಾಡಿದ್ದು, ತನ್ನ ಮನೆಗೆಲಸದವರಿಗೆ ತಲಾ 10,000 ರಿಂಗಿಟ್ (1.85 ಲಕ್ಷ ರೂ.) ಬೋನಸ್ ಕೊಟ್ಟು, ಅವರನ್ನು ಹೆಲಿಕಾಪ್ಟರ್‌ನಲ್ಲಿ ಐಷಾರಾಮಿ ದ್ವೀಪವೊಂದಕ್ಕೆ ಪ್ರವಾಸಕ್ಕೆ ಕಳುಹಿಸಿದ ವಿಚಾರ ತಿಳಿಸಿದ್ದಾರೆ.

ಅಂತರ್ಜಾಲದಲ್ಲಿ ಈ ವಿಡಿಯೋ ಭಾರೀ ಸದ್ದು ಮಾಡುತ್ತಿದ್ದು, ರಮದಾನ್ ಹಬ್ಬದ ಸಂದರ್ಭವನ್ನು ತನ್ನ ಮನೆಗೆಲಸದವರೂ ಅದ್ಧೂರಿಯಾಗಿ ಮಾಡಲೆಂದು ಇಷ್ಟೆಲ್ಲಾ ಮಾಡುತ್ತಿರುವ ಮಾಲೀಕರನ್ನು ನೆಟ್ಟಿಗರು ಮೆಚ್ಚಿ ಕೊಂಡಾಡಿದ್ದಾರೆ. ಇವರೆಲ್ಲರನ್ನೂ ದೇಸಾರು ಕರಾವಳಿಯ ದ್ವೀಪವೊಂದರಲ್ಲಿರುವ ಒನ್ ಅಂಡ್ ಓನ್ಲಿ ರೆಸಾರ್ಟ್‌ನ ಖಾಸಗಿ ಸೂಟ್‌ನಲ್ಲಿ ವಾಸಿಸಲು ಅವಕಾಶ ಮಾಡಿಕೊಡಲಾಗಿತ್ತು.

https://twitter.com/mmagshare/status/1646446908859351041?ref_src=twsrc%5Etfw%7Ctwcamp%5Etweetembed%7Ctwterm%5E1646446908859351041%7Ctwgr%5E9832169ccdab53d422dccf606e4668f115b7e710%7Ctwcon%5Es1_&ref_url=https%3A%2F%2Fwww.news18.com%2Fbuzz%2Fmalaysian-entrepreneur-gives-rs-2-lakh-bonus-luxury-vacation-to-domestic-helps-7554673.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read