ಮಧ್ಯಾಹ್ನ ಆದರೆ ಸೀತೆ ಜೊತೆ ಹೆಂಡ ಕುಡಿದುಕೊಂಡು ಕುಳಿತುಕೊಂಡಿರುತ್ತಿದ್ದ ರಾಮ; ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಕೆ.ಎಸ್. ಭಗವಾನ್

ವಿವಾದಾತ್ಮಕ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಚಿಂತಕ ಕೆ.ಎಸ್. ಭಗವಾನ್ ಇದೀಗ ಮರ್ಯಾದ ಪುರುಷೋತ್ತಮ ಶ್ರೀರಾಮನ ಕುರಿತು ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಮಧ್ಯಾಹ್ನ ಆದರೆ ಸಾಕು ಸೀತೆ ಜೊತೆ ಹೆಂಡ ಕುಡಿದುಕೊಂಡು ಕುಳಿತಿರುತ್ತಿದ್ದ ರಾಮ ಆಕೆಗೂ ಕುಡಿಸುತ್ತಿದ್ದ ಎಂದು ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ನಡೆದ ಪುಸ್ತಕ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದು, ವಾಲ್ಮೀಕಿ ರಾಮಾಯಣದ ಉತ್ತರ ಕಾಂಡದಲ್ಲಿ ಇದರ ಬಗ್ಗೆ ದಾಖಲೆ ಇದೆ ಎಂದು ತಿಳಿಸಿದ್ದಾರೆ.

ರಾಮ ರಾಜ್ಯಕ್ಕೆ ಯಾವುದೇ ಅರ್ಥವಿಲ್ಲ. ಮಹಾತ್ಮ ಗಾಂಧೀಜಿಯವರ ಕಾರಣದಿಂದ ರಾಮ ರಾಜ್ಯದ ಮಾತು ಹರಡುತ್ತಿದೆ. ಆದರೆ ರಾಮ, ತನ್ನ ಆಡಳಿತದ ಸಮಯದಲ್ಲಿ ಪುರೋಹಿತರ ಜೊತೆ ಕೂತು ಹರಟೆ ಹೊಡೆಯುತ್ತಿದ್ದ. ಅಲ್ಲದೆ ಲಕ್ಷ್ಮಣನನ್ನು ಆತ ಗಡಿಪಾರು ಮಾಡಿದ್ದ. ಸೀತೆಯನ್ನು ಕಾಡಿಗೆ ಕಳುಹಿಸಿದ್ದ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read