ಹತ್ತು ನಿಮಿಷದಲ್ಲಿ ಫುಡ್ ಡಿಲಿವರಿ ಆಗಿರುವುದೆಲ್ಲಾದರೂ ಕೇಳಿದ್ದಿರಾ? ಚಾನ್ಸೇ ಇಲ್ಲ ಅಂತಿರಾ ? ಆದರೆ ಬೆಂಗಳೂರಿನಲ್ಲಿ ಹತ್ತೇ ಹತ್ತು ಸೆಕೆಂಡ್‌ನಲ್ಲಿ ಆರ್ಡರ್ ಮಾಡಿದ್ದ ಫುಡ್ ಕೈಗೆ ಸಿಗುವಂತೆ ಮಾಡಿದ್ದಾನೆ ಡಿಲೆವರಿ ಬಾಯ್. ಇದು ಅಚ್ಚರಿಯ ವಿಚಾರ ಆದರೂ ಸತ್ಯ.
ಅಸಲಿಗೆ ಕೆನಡಾ ಮೂಲದ ಕ್ಯಾಲೆಬ್ ಅವರಿಗೆ ಮಧ್ಯರಾತ್ರಿ ಹಸಿವಾಗಿದೆ. ಆಗ ಅವರು ಕೋರಮಂಗಲದ ಬಳಿ ಇರುವ ಅನೇಕ ಅಂಗಡಿ ಬಳಿ ಹೋಗಿ ನೋಡಿದ್ದಾರೆ. ಎಲ್ಲ ಅಂಗಡಿಗಳ ಬಾಗಿಲುಗಳು ಮುಚ್ಚಿದ್ದವು. ಆಗ ಅವರು ಅಲ್ಲೇ ಇದ್ದ ಮ್ಯಾಕ್ ಡೋನಾಲ್ಡ್ ಬಳಿ ಹೋಗಿದ್ದಾರೆ. ಅದರ ಬಾಗಿಲು ಕೂಡಾ ಮುಚ್ಚಲಾಗಿತ್ತು. ಆದರೆ ಅಲ್ಲೇ ಇದ್ದ ಪಿಕ್ ಅಪ್ ವಿಂಡೋ (ಪುಟ್ಟ ಕಿಟಕಿ) ಬಳಿ ಕೆಲ ಡಿಲಿವರಿ ಬಾಯ್ಸ್, ಸ್ವಿಗ್ಗಿಯಲ್ಲಿ ಗ್ರಾಹಕರು ಮಾಡಿದ್ದ ಆರ್ಡರ್ ಗಳನ್ನ ತೆಗೆದುಕೊಳ್ಳಲು ನಿಂತಿದ್ದರು.
ಅಲ್ಲೇ ನಿಂತ ಕ್ಯಾಲೆಬ್,ತಕ್ಷಣವೇ ಮೊಬೈಲ್‌ನಿಂದ ಸ್ವಿಗ್ಗಿ ಮೂಲಕ ತಮಗೆ ಬೇಕಾಗಿದ್ದನ್ನ ಆರ್ಡರ್ ಮಾಡಿದ್ದಾರೆ. ಡಿಲೆವರಿ ಬಾಯ್ ಕೈಗೆ ಸಿಕ್ಕ ತಕ್ಷಣವೇ ಮೊಬೈಲ್ ಚೆಕ್ ಮಾಡಿ ಅಲ್ಲೇ ಇದ್ದ ಕ್ಯಾಲೆಬ್‌ಗೆ ಆ ಆರ್ಡರ್‌ನ್ನ ತಂದು ಕೈಗೆ ಕೊಟ್ಟಿದ್ದಾನೆ.
ಕ್ಯಾಲೆಬ್ ಫ್ರಾಯ್ಸೆನ್ ತಮಗಾದ ಈ ಅನುಭವವನ್ನ ಟ್ವಿಟ್ಟರ್ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ಧಾರೆ. ಇಲ್ಲಿ ಸ್ವಿಗ್ಗಿಬಾಯ್ ಕೂಡಾ ತಾನು ಅತ್ಯಂತ ಹತ್ತಿರದ ಸ್ಥಳದಲ್ಲಿ ಆರ್ಡರ್ ತಲುಪಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ.
ಈ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕ್ಯಾಲೆಬ್ ಆ ಕ್ಷಣದಲ್ಲಿ ಓಡಿಸಿದ ಬುದ್ಧಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೆ ಅಲ್ಲ ಮ್ಯಾಕ್ಡೊನಾಲ್ಡ್ ಹಾಗೂ ಸ್ವಿಗ್ಗಿ ಇಷ್ಟು ವೇಗವಾಗಿ ಫುಡ್ ಡಿಲೆವರಿ ಮಾಡುವ ಹಾಗಿದ್ದರೆ ಎಷ್ಟು ಚೆಂದ ಅಂತ ತಮ್ಮ ಬಿಟ್ಟಿ ಸಲಹೆಯನ್ನ ಕೂಡಾ ಕೊಟ್ಟಿದ್ದಾರೆ.
https://twitter.com/caleb_friesen2/status/1623293657892929536?ref_src=twsrc%5Etfw%7Ctwcamp%5Etweetembed%7Ctwterm%5E1623293657892929536%7Ctwgr%5E53c2243454239931be02b5f5d3e2f84f3faf1054%7Ctwcon%5Es1_&ref_url=https%3A%2F%2Fd-1620374624804456945.ampproject.net%2F2301261900000%2Fframe.html