ಮದುವೆಯ ಮೊದಲ ರಾತ್ರಿ ವಧು – ವರನೊಂದಿಗೆ ಮಲಗುತ್ತಾಳೆ ತಾಯಿ….! ಜಗತ್ತಿನ ಏಕೈಕ ಸ್ಥಳದಲ್ಲಿದೆ ಈ ವಿಲಕ್ಷಣ ಸಂಪ್ರದಾಯ

ವಿವಾಹ ಸಂಪ್ರದಾಯಗಳು ವಿಚಿತ್ರ ಮತ್ತು ವಿಭಿನ್ನವಾಗಿರುತ್ತವೆ. ಆದರೆ ಬಹುತೇಕ ಎಲ್ಲಾ ಕಡೆಗಳಲ್ಲಿ ಇವನ್ನೆಲ್ಲ ತಪ್ಪದೇ ಪಾಲಿಸುತ್ತಾರೆ. ಇದಕ್ಕೆಲ್ಲ ಅವರದ್ದೇ ಆದ ತರ್ಕವಿದೆ. ಮದುವೆಯ ನಂತರ ವಧು-ವರರ ಮೊದಲ ರಾತ್ರಿ ಆಯೋಜನೆ ಮಾಡುವುದು ಸಾಮಾನ್ಯ.

ಆದರೆ ಮೊದಲ ರಾತ್ರಿ ವಧು-ವರನ ಜೊತೆಗೆ ವಧುವಿನ ತಾಯಿ ಕೂಡ ಮಲಗುವ ವಿಚಿತ್ರ ಆಚರಣೆಯೊಂದಿದೆ. ಆಫ್ರಿಕನ್ ಖಂಡದ ಅನೇಕ ದೇಶಗಳಲ್ಲಿ ಅಂತಹ ಆಚರಣೆ ಇದೆ.

ಇಲ್ಲಿನ ಕೆಲವು ಬುಡಕಟ್ಟು ಪ್ರದೇಶಗಳಲ್ಲಿ ಮದುವೆಯ ನಂತರ  ವಧುವಿನ ತಾಯಿ ಕೂಡ ದಂಪತಿಗಳೊಂದಿಗೆ ಫಸ್ಟ್‌ ನೈಟ್‌ನಲ್ಲಿ ಮಲಗುತ್ತಾಳೆ. ಈ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಆಚರಣೆಯನ್ನು ಅಲ್ಲಿನ ನಿವಾಸಿಗಳು ತಪ್ಪದೇ ಪಾಲಿಸುತ್ತಾರೆ. ವಧು-ವರರು ಒಬ್ಬರಿಗೊಬ್ಬರು ಹೊಸಬರು. ಹಾಗಾಗಿ ಅವರಿಗೆ ಸಲಹೆ ನೀಡಲು ಮೊದಲ ರಾತ್ರಿ ತಾಯಿ ಅವರೊಂದಿಗೆ ಇರುತ್ತಾರೆ ಎಂಬುದು ಜನರ ವಾದ.

ಸಂತೋಷದ ಜೀವನವನ್ನು ಹೇಗೆ ನಡೆಸಬೇಕು? ಇದಕ್ಕಾಗಿ ಏನು ಮಾಡಬೇಕು ಎಂಬುದನ್ನೆಲ್ಲ ತಾಯಿ ನವದಂಪತಿಗೆ ಹೇಳಿಕೊಡುತ್ತಾಳಂತೆ. ಮರುದಿನ ತಾಯಿ ವಧು  – ವರನ ಮೊದಲ ರಾತ್ರಿ ಹೇಗಿತ್ತು? ಅವರು ಸಂತೋಷವಾಗಿದ್ದರೋ ಇಲ್ಲವೋ ಎಂಬುದನ್ನು ಇತರ ಕುಟುಂಬ ಸದಸ್ಯರಿಗೆ ಹೇಳುತ್ತಾಳೆ. ಚೀನಾದ ಕೆಲವು ಪ್ರದೇಶಗಳಲ್ಲಿ ಕೂಡ ಇದೇ ರೀತಿಯ ಸಂಪ್ರದಾಯವಿದೆಯಂತೆ. ಇಲ್ಲಿ ವಧು ಮತ್ತು ಆಕೆಯ ಕುಟುಂಬದವರು ಮದುವೆಗೆ ಮುನ್ನ ವರನೊಂದಿಗೆ ಸಮಯ ಕಳೆಯುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read