ಮದುವೆಯಾದ ಬಳಿಕ ಸ್ಪೋಟಕ ಸಂಗತಿ ಬಿಚ್ಚಿಟ್ಟ ರಾಖಿ ಸಾವಂತ್….!

ಡ್ರಾಮಾ ಕ್ವೀನ್‌ ಎಂದೇ ಹೆಸರಾಗಿರುವ ನಟಿ ರಾಖಿ ಸಾವಂತ್‌ ಒಂದಿಲ್ಲೊಂದು ವಿಚಾರಕ್ಕೆ ಚರ್ಚೆಯಲ್ಲಿರ್ತಾಳೆ. ಸದ್ಯ ರಾಖಿ ತನ್ನ ಎರಡನೇ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದಾಳೆ.

ಗೆಳೆಯ ಆದಿಲ್ ಖಾನ್ ದುರಾನಿಯೊಂದಿಗೆ ನಟಿ ಎರಡನೇ ಮದುವೆಯಾಗಿದ್ದಾಳಂತೆ. ರಾಖಿ ಸಾವಂತ್ ಮತ್ತು ಆದಿಲ್ 7 ತಿಂಗಳ ಹಿಂದೆಯೇ ನಿಖಾಹ್‌ ಮಾಡಿಕೊಂಡಿದ್ದು, ಈಗ ರಾಖಿ  ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಮದುವೆ ವಿಚಾರ ಮುಚ್ಚಿಟ್ಟಿದ್ದು ಏಕೆ?

ರಾಖಿ ಸಾವಂತ್ ತನ್ನ ಮದುವೆಯನ್ನು ಇಷ್ಟು ತಿಂಗಳ ಕಾಲ ರಹಸ್ಯವಾಗಿಟ್ಟಿದ್ದೇಕೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಇದಕ್ಕೂ ಸ್ವತಃ ನಟಿಯೇ ಉತ್ತರ ನೀಡಿದ್ದಾರೆ. ‘ನಮ್ಮ ಮದುವೆಯಾಗಿ 7 ತಿಂಗಳು ಕಳೆದಿವೆ. ಆದರೆ ಅದನ್ನು ಗೌಪ್ಯವಾಗಿಡುವಂತೆ ಆದಿಲ್ ಕೇಳಿದ್ದ. ನಾವು ಕೋರ್ಟ್‌ ಮ್ಯಾರೇಜ್‌ ಮತ್ತು ನಿಕಾಹ್ ಮಾಡಿಕೊಂಡಿದ್ದೇವೆ. ನನ್ನ ಜೀವನದಲ್ಲಿ ಎಲ್ಲವೂ ಸರಿಯಿಲ್ಲʼ ಎನ್ನುವ ಮೂಲಕ ಮದುವೆ ಸುದ್ದಿಗೂ ರಾಖಿ ಹೊಸ ಟ್ವಿಸ್ಟ್‌ ಕೊಟ್ಟಿದ್ದಾಳೆ.

ಆದಿಲ್ ಮೇಲೆ ಅನುಮಾನ

ಬಿಗ್ ಬಾಸ್’ ಮರಾಠಿ ಸ್ಪರ್ಧಿಯೊಂದಿಗೆ ಆದಿಲ್, ಅಫೇರ್ ಹೊಂದಿರುವ ಅನುಮಾನವಿದೆ ಎಂದು ರಾಖಿ ಹೇಳಿದ್ದಾಳೆ. ಇದೇ ಕಾರಣಕ್ಕೆ ಮದುವೆ ವಿಚಾರ ಗೌಪ್ಯವಾಗಿಡಲು ಹೇಳಿರಬಹುದು ಅನ್ನೋದು ರಾಖಿಯ ಅನುಮಾನ. ರಾಖಿ ಸಾವಂತ್‌ ತಾಯಿ ಸಹ ತೀವ್ರ ಅನಾರೋಗ್ಯಕ್ಕೀಡಾಗಿದ್ದು, ಇದೇ ಸಮಯದಲ್ಲಿ ಆದಿಲ್‌ ಸಹ ಈ ರೀತಿ ಮಾಡುತ್ತಿರುವುದರಿಂದ ಬಹಳ ಬೇಸರಗೊಂಡಿದ್ದೇನೆ ಅಂತಾ ಆಕೆ ಹೇಳಿಕೊಂಡಿದ್ದಾಳೆ.

ರಾಖಿ ಸಾವಂತ್‌ ತಾಯಿ ಕ್ಯಾನ್ಸರ್ ಮತ್ತು ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದಾರೆ. ರಾಖಿ ಈ ಮೊದಲು ಉದ್ಯಮಿ ರಿತೇಶ್‌ ಎಂಬಾತನನ್ನು ಮದುವೆಯಾಗಿದ್ದಳು. ಆದರೆ ಮೊದಲ ಮದುವೆ ಸಹ ಬೇಗನೆ ಮುರಿದು ಬಿದ್ದಿತ್ತು. ಇಬ್ಬರೂ ವಿಚ್ಛೇದನ ಪಡೆದಿದ್ದರು . ಇದೀಗ ಆದಿಲ್‌ ಜೊತೆ ಎರಡನೇ ಮದುವೆಯಾಗಿರೋ ರಾಖಿ ಮತ್ತೆ ಸುದ್ದಿಯಲ್ಲಿದ್ದಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read