ಇಲ್ಲಿದೆ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಬಾಲಿವುಡ್ ಬೆಡಗಿಯರ ಪಟ್ಟಿ…!

ಬಾಲಿವುಡ್‌ ನಟ-ನಟಿಯರು ಎಷ್ಟೋ ಬಾರಿ ವೈಯಕ್ತಿಕ ಕಾರಣಕ್ಕೆ ಸುದ್ದಿಯಾಗ್ತಾರೆ. ಪ್ರೀತಿ, ಬ್ರೇಕಪ್‌, ಮದುವೆ, ಗರ್ಭಧಾರಣೆ, ವಿಚ್ಛೇದನ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತಾರೆ. ಬಿಟೌನ್‌ನ ಹಲವು ನಟಿಯರು ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದರು. ಈ ಬಗ್ಗೆ ಕೆಲವರು ಮುಕ್ತವಾಗಿ ಮಾತನಾಡಿದ್ದರೆ, ಇನ್ನು ಕೆಲವರು ಮೌನ ವಹಿಸಿದ್ದಾರೆ. ಮದುವೆಗೂ ಮೊದಲೇ ಗರ್ಭಧರಿಸಿದ್ದ ನಟಿಯರು ಯಾರ್ಯಾರು ಅನ್ನೋದನ್ನು ನೋಡೋಣ.

ನೀನಾ ಗುಪ್ತಾ: ನಟಿ ನೀನಾ ಗುಪ್ತಾ ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದರು. ಕ್ರಿಕೆಟಿಗ ವಿವಿಯನ್‌ ರಿಚರ್ಡ್ಸ್‌ ಜೊತೆಗೆ ಡೇಟಿಂಗ್‌ನಲ್ಲಿದ್ದ ನೀನಾ ಗುಪ್ತಾ, ಮದುವೆಗೂ ಮುನ್ನವೇ ತಾನು ಗರ್ಭಿಣಿಯಾಗಿದ್ದೆ ಅನ್ನೋದನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ. ನೀನಾ ಗುಪ್ತಾರ ಮಗಳು ಮಸಾಬಾ ಗುಪ್ತಾ ಸದ್ಯ ಜನಪ್ರಿಯ ಡಿಸೈನರ್‌. ನೀನಾ ಗುಪ್ತಾ ತಮ್ಮ ಮಗಳನ್ನು ಏಕಾಂಗಿಯಾಗಿಯೇ ಬೆಳೆಸಿದ್ದಾರೆ.

ನೇಹಾ ಧೂಪಿಯಾ : ನಟಿ ನೇಹಾ ಧೂಪಿಯಾ 2018ರ ಮೇನಲ್ಲಿ ನಟ ಅಂಗದ್ ಬೇಡಿ ಅವರನ್ನು ಹಠಾತ್ತನೆ ವಿವಾಹವಾದರು. ಈ ದಿಢೀರ್‌ ಮದುವೆ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ವಿವಾಹಕ್ಕೂ ಮೊದಲೇ ನೇಹಾ ಗರ್ಭಿಣಿಯಾಗಿದ್ದರು. ಮದುವೆಯಾದ ಆರು ತಿಂಗಳಿಗೆ ನೇಹಾ ಧೂಪಿಯಾಗೆ ಹೆರಿಗೆಯಾಗಿದೆ. ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ವಿಷಯವನ್ನು ಸ್ವತಃ ನೇಹಾ ಹೇಳಿದ್ದಾರೆ.

ಶ್ರೀದೇವಿ : ಸೂಪರ್‌ ಸ್ಟಾರ್‌ ಶ್ರೀದೇವಿ ಕೂಡ ಮದುವೆಗೂ ಮೊದಲೇ ಗರ್ಭಧರಿಸಿದ್ದರು. ಬೋನಿ ಕಪೂರ್ ಅವರನ್ನು ಮದುವೆಯಾದಾಗ ನಾನು ಗರ್ಭಿಣಿಯಾಗಿದ್ದೆ ಎಂಬುದನ್ನು ಶ್ರೀದೇವಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಮದುವೆಯ ಸಮಯದಲ್ಲಿ ಶ್ರೀದೇವಿ ಏಳು ತಿಂಗಳ ತುಂಬು ಗರ್ಭಿಣಿ.

ಆಲಿಯಾ ಭಟ್ : ಬಾಲಿವುಡ್‌ನಲ್ಲಿ ಸಾಕಷ್ಟು ಫೇಮಸ್‌ ಆಗಿರೋ ನಟಿ ಆಲಿಯಾ ಭಟ್‌ ಕೂಡ ಇದರಿಂದ ಹೊರತಾಗಿಲ್ಲ. ರಣಬೀರ್‌ ಕಪೂರ್‌ ಜೊತೆಗೆ ಸಪ್ತಪದಿ ತುಳಿಯುವ ಮೊದಲೇ ಆಲಿಯಾ ಗರ್ಭಿಣಿಯಾಗಿದ್ದಳು. ಆದರೆ ಇದನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲ. ಏಪ್ರಿಲ್‌ನಲ್ಲಿ ಇವರಿಬ್ಬರ ವಿವಾಹ ನೆರವೇರಿದೆ. ಮದುವೆಯಾದ ಎರಡು ತಿಂಗಳ ನಂತರ ತಾನು ಗರ್ಭಿಣಿ ಅನ್ನೋದನ್ನು ಆಲಿಯಾ ಬಹಿರಂಗಪಡಿಸಿದ್ದಳು. ನವೆಂಬರ್‌ನಲ್ಲಿ ಆಲಿಯಾಗೆ ಹೆರಿಗೆಯಾಗಿದ್ದು, ಹೆಣ್ಣು ಮಗು ಜನಿಸಿದೆ.

ಸಾರಿಕಾ : ದಕ್ಷಿಣದ ನಟಿ ಸಾರಿಕಾ ಕೂಡ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದರು ಅನ್ನೋದು ಬಹುತೇಕರಿಗೆ ತಿಳಿದಿಲ್ಲ. ಸಾರಿಕಾ, ನಟ ಕಮಲ್ ಹಾಸನ್ ಜೊತೆ ಸಂಬಂಧ ಹೊಂದಿದ್ದರು. ಶ್ರುತಿ ಹಾಸನ್‌ಗೆ ಜನ್ಮ ನೀಡಿ ಸುಮಾರು ಎರಡು ವರ್ಷಗಳ ನಂತರ ಸಾರಿಕಾ ಕಮಲ್ ಹಾಸನ್ ಅವರನ್ನು ವಿವಾಹವಾದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read