ಮತ್ತೊಂದು ಅವಧಿಗೆ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಮುಂದುವರಿತಾರಾ ಡಾ.ಸಿ.ಎನ್. ಮಂಜುನಾಥ್…..? ಕುತೂಹಲ ಮೂಡಿಸಿದ ಸಿಎಂ ಭೇಟಿ

ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ಸೇವಾವಧಿ ಒಂದು ವರ್ಷ ವಿಸ್ತರಣೆ  Vistara News

ಬೆಂಗಳೂರು: ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರ ನಿರ್ದೇಶಕ ಸ್ಥಾನದ ಅವಧಿ ಜುಲೈ 16ರಂದು ಮುಕ್ತಾಯವಾಗಲಿದ್ದು, ಈ ಹಿನ್ನೆಲೆಯಲ್ಲಿ ಡಾ.ಸಿ.ಎನ್. ಮಂಜುನಾಥ್ ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

2007ರಿಂದಲು ಡಾ.ಸಿ.ಎನ್. ಮಂಜುನಾಥ್ ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಸತತ 16 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 2022ರ ಜುಲೈನಲ್ಲಿ ಅವರ ನಿರ್ದೇಶಕ ಸ್ಥಾನದ ಅವಧಿ ಮುಕ್ತಾಯವಾಗಿತ್ತು. ಆದರೆ ರೋಗಿಗಳ ಹಾಗೂ ಜನರ ಒತ್ತಾಯದ ಮೇರೆಗೆ ಬಿಜೆಪಿ ಸರ್ಕಾರ ಡಾ.ಸಿ.ಎನ್. ಮಂಜುನಾಥ್ ಸೇವಾವಧಿ ಒಂದು ವರ್ಷ ವಿಸ್ತರಿಸಿ ಮುಂದುವರೆಸಿತ್ತು.

ಇದೀಗ ಜುಲೈ 16ಕ್ಕೆ ಅವರ ಸೇವಾವಧಿ ಮುಕ್ತಾಯವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಡಾ.ಸಿ.ಎನ್. ಮಂಜುನಾಥ್ ಅವರೇ ಮತ್ತೆ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಮುಂದುವರೆಯಲಿದ್ದಾರಾ? ಅಥವಾ ಜಯದೇವ ಆಸ್ಪತ್ರೆಗೆ ಹೊಸ ನಿರ್ದೇಶಕರು ನೇಮಕ ಆಗಲಿದ್ದಾರಾ? ಎಂಬ ಕುತೂಹಲಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read