‘ಮತದಾನ’ ಮಾಡಲು ವಿದೇಶದಿಂದ ಬಂದ ಮಲೆನಾಡಿನ ಯುವಕ….!

ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು ಈಗಾಗಲೇ ಇದು ಆರಂಭವಾಗಿದೆ. ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, ಬೆಳಿಗ್ಗೆಯಿಂದಲೇ ಮತದಾರರು ಮತಗಟ್ಟೆಗಳ ಮುಂದೆ ಕ್ಯೂ ಹಚ್ಚಿ ನಿಂತಿದ್ದಾರೆ.

ಮತದಾನದ ಪ್ರಮಾಣ ಹೆಚ್ಚಿಸಲು ಪ್ರತಿ ಬಾರಿಯೂ ಚುನಾವಣಾ ಆಯೋಗ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದರ ನಡುವೆಯೂ ಬಹಳಷ್ಟು ಮಂದಿ ಮತದಾನದ ಮಹತ್ವ ಅರಿಯದೆ ನಿರ್ಲಕ್ಷ್ಯ ವಹಿಸುತ್ತಾರೆ. ಇಂಥವರ ಮಧ್ಯೆ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಲೆನಾಡಿನ ಯುವಕನೊಬ್ಬ ಮತದಾನ ಮಾಡುವ ಸಲುವಾಗಿಯೇ ರಜೆ ಪಡೆದುಕೊಂಡು ಸ್ವದೇಶಕ್ಕೆ ಬಂದಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ಕಾಗಿನೆರೆ ಗ್ರಾಮದ ಕಾಫಿ ಬೆಳೆಗಾರರಾದ ಪರಮೇಶ್ – ಸುಧಾ ದಂಪತಿಯ ಪುತ್ರ ಸ್ಪಂದನ್ ಗೌಡ ಲಂಡನ್ ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದು, ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬ ಮತದಾನಕ್ಕಾಗಿ ಕಾಲೇಜು ಮುಖ್ಯಸ್ಥರ ಅನುಮತಿ ಪಡೆದು ಸ್ವಗ್ರಾಮಕ್ಕೆ ಆಗಮಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read