ಮತಗಟ್ಟೆ ಸಮೀಕ್ಷೆ; ನಂಬರ್ ಗಳು ನಿಮ್ಮ ಊಹೆ ಎಂದ ಬಿ.ಎಲ್. ಸಂತೋಷ್

ಬೆಂಗಳೂರು: ಮತಗಟ್ಟೆಗಳ ಬಹುತೇಕ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬ ವರದಿ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ನಂಬರ್ ಗಳು ನಿಮ್ಮ ಊಹೆ ಅಷ್ಟೇ ಎಂದು ಹೇಳಿದ್ದಾರೆ.

ಮತದಾನೋತ್ತರ ಸಮೀಕ್ಷೆ ವಿಚಾರವಾಗಿ ಟ್ವೀಟ್ ಮಾಡಿರುವ ಬಿ.ಎಲ್. ಸಂತೋಷ್, 2014ರಲ್ಲಿ 282 ಸೀಟ್ ಗೆಲ್ಲುತ್ತೆ ಅಂತಾ ಯಾರೂ ಊಹಿಸಿರಲಿಲ್ಲ ಎಂದು ಹೇಳುವ ಮೂಲಕ 2014ರ ಲೋಕಸಭಾ ಚುನಾವಣಾ ಫಲಿತಾಂಶವನ್ನು ಉಲ್ಲೇಖ ಮಾಡಿದ್ದಾರೆ. 2019ರಲ್ಲಿ 303 ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದೇವೆ. 2022ರ ಗುಜರಾತ್ ಚುನಾವಣೆಯಲ್ಲಿ 156 ಸೀಟ್ ಗೆದ್ದಿದ್ದೇವೆ. 2018ರಲ್ಲಿ ಕರ್ನಾಟಕ ಚುನಾವಣೆಯಲ್ಲಿ 104 ಸ್ಥಾನ ಗೆದ್ದಿದ್ದೇವೆ ಎಂದು ತಿಳಿಸಿದ್ದಾರೆ.

2018ರಲ್ಲಿ ಬಿಜೆಪಿ 24 ಸಾವಿರ ಬೂತ್ ನಲ್ಲಿ ಶೂನ್ಯ ಸಾಧನೆ ಮಾಡಿದೆ. ಈ ಬಾರಿ 31 ಸಾವಿರ ಬೂತ್ ಗಳಲ್ಲಿ ಮುನ್ನಡೆ ಸಾಧಿಸಿದ್ದೇವೆ. ನಂಬರ್ ಗಳು ನಿಮ್ಮ ಊಹೆ ಎಂದು ಬಿ.ಎಲ್.ಸಂತೋಷ್ ತಿಳಿಸಿದ್ದಾರೆ.

ಬಿ.ಎಲ್.ಸಂತೋಷ್,ಟ್ವೀಟ್,ಮತದಾನೋತ್ತರ ಸಮೀಕ್ಷೆ,B.L.Santosh,Tweet,Exit poll

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read