ಮಕ್ಕಳ ಅಧ್ಯಯನ ಕೋಣೆಯಲ್ಲಿರಲಿ ಈ ಎಲ್ಲ ʼವಸ್ತುʼ

ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿರಬೇಕಾದ ಪ್ರತಿಯೊಂದು ವಸ್ತುಗಳ ಬಗ್ಗೆಯೂ ಹೇಳಲಾಗಿದೆ. ಮಕ್ಕಳ ವಿದ್ಯಾಭ್ಯಾಸ, ಮಕ್ಕಳ ಕೋಣೆ ಹೇಗಿರಬೇಕೆಂದೂ ಹೇಳಲಾಗಿದೆ. ಮಕ್ಕಳು ಶಿಕ್ಷಣದಲ್ಲಿ ಯಶಸ್ಸು ಸಾಧಿಸಬೇಕೆಂದ್ರೆ ಅವ್ರ ಕೋಣೆಯಲ್ಲಿ ಕೆಲವೊಂದು ಬದಲಾವಣೆ ಮಾಡಬೇಕು.

ಹಿಂದೂ ಧರ್ಮದಲ್ಲಿ ತಾಯಿ ಸರಸ್ವತಿಯನ್ನು ಜ್ಞಾನದ ದೇವತೆ ಎನ್ನಲಾಗುತ್ತದೆ. ತಾಯಿ ಸರಸ್ವತಿಯ ವಿಗ್ರಹವನ್ನು ಮಕ್ಕಳು ಓದುವ ಕೋಣೆಯಲ್ಲಿ ಇಡಬೇಕು. ಪ್ರತಿ ದಿನ ತಾಯಿ ಸರಸ್ವತಿ ದರ್ಶನದಿಂದ ಮಕ್ಕಳ ಬುದ್ದಿ ಚುರುಕಾಗುತ್ತದೆ.

ಮಕ್ಕಳ ಅಧ್ಯಯನ ಕೋಣೆಯಲ್ಲಿ  ಕಮಲದ ಹೂವನ್ನು ಇಡಬೇಕು. ಕಮಲದ ಹೂವಿನ ಮೇಲೆ ಸರಸ್ವತಿ ವಾಸಿಸುತ್ತಾಳೆಂಬ ನಂಬಿಕೆಯಿದೆ.

ತಾಯಿ ಸರಸ್ವತಿಗೆ ಪ್ರಿಯವಾದ್ದರಲ್ಲಿ ವೀಣೆ ಕೂಡ ಒಂದು. ವೀಣೆಯನ್ನು ಮನೆಯಲ್ಲಿ ಇಡುವುದರಿಂದ ಮಕ್ಕಳಲ್ಲಿ ಸಂತೋಷ ಮತ್ತು ಶಾಂತಿ ಹೆಚ್ಚಾಗುತ್ತದೆ.

ನವಿಲು ಗರಿಗಳನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಅದನ್ನು ಮನೆಯಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿ ಓಡಿಸಬಹುದು. ಇದು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ.

ಹಂಸದ ಚಿತ್ರವನ್ನು ಬಹಳ ಶುಭವೆಂದು ಪರಿಗಣಿಸಲಾಗಿದೆ. ಅಧ್ಯಯನ ಕೊಠಡಿಯಲ್ಲಿ ಇದನ್ನು ಇಡುವುದರಿಂದ ಅಧ್ಯಯನದಲ್ಲಿ ಏಕಾಗ್ರತೆ ಕಾಣಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read