ಮಂಗಳೂರು : ಮಂಗಳೂರಿನಲ್ಲಿ (Mangalore) ಅಕ್ರಮವಾಗಿ ಗೋವು ಸಾಗಾಟದ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು (Police Arrest) ಬಂಧಿಸಿರುವ ಘಟನೆ ನಡೆದಿದೆ.
ದಕ್ಷಿಣ ಕನ್ನಡದ ಅಂಬ್ಲಮೊಗರು ಗ್ರಾಮದಲ್ಲಿ ನಾಲ್ಕು ಹಸುಗಳನ್ನು ಖರೀದಿಸಿ ಕೇರಳ ನೋಂದಾಯಿತ ಸಂಖ್ಯೆಯ ವ್ಯಾನ್ನಲ್ಲಿ ಸಾಗಿಸುತ್ತಿದ್ದರು. ಈ ವೇಳೆ ಸ್ಥಳೀಯ ನಿವಾಸಿಯೊಬ್ಬರು ನೀಡಿದ ದೂರಿನನ್ವಯ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಉಳ್ಳಾಲ ನಿವಾಸಿಗಳಾದ ಖಾಲಿದ್, ಅಹ್ಮದ್ ಇರ್ಷಾದ್, ಜಾಫರ್ ಸಾದಿಕ್ ಮತ್ತು ಪಯಾಝ್ ಎಂಬುವರನ್ನು ಮಂಗಳೂರು ಹೊರವಲಯದ ಕಲ್ಲಾಪು ಬಳಿ ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಬಂಧಿತ ನಾಲ್ವರ ವಿರುದ್ಧ ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಗೋಹತ್ಯೆ ತಡೆ ಕಾಯ್ದೆಯ ಸೆಕ್ಷನ್ 4, 5, 7 ಮತ್ತು 12, ಸೆಕ್ಷನ್ 11(1) (ಎ), 11 (ಇ), 11 (ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.