ಭಾರತದಲ್ಲಿ ಅತಿ ಹೆಚ್ಚು ಸಂಬಳ ನೀಡುವ ಸರ್ಕಾರಿ ಉದ್ಯೋಗಗಳಿವು…!

ಒಳ್ಳೆ ಸ್ಥಾನಮಾನ, ಕೈತುಂಬಾ ಸಂಬಳ ಹಾಗೂ ಇತರೆ ಸೌಲಭ್ಯಗಳಿರುವ ಉದ್ಯೋಗ ಮಾಡಲು ಎಲ್ಲರೂ ಬಯಸ್ತಾರೆ. ಇದರಿಂದ ಆರಾಮಾಗಿ ಕುಟುಂಬ ನಿರ್ವಹಣೆ ಮಾಡಬಹುದು ಅನ್ನೋದು ಲೆಕ್ಕಾಚಾರ. ಆದರೆ ಉನ್ನತ ಹುದ್ದೆಗಳನ್ನು ಅಲಂಕರಿಸೋದು ಕೆಲವೇ ಕೆಲವರು ಮಾತ್ರ.

ಭಾರತದಲ್ಲಿನ ಉನ್ನತ ಸರ್ಕಾರಿ ಉದ್ಯೋಗಗಳ ವಿವರಗಳನ್ನು ನೋಡೋಣ. ಅತಿ ಹೆಚ್ಚು ವೇತನದ ಜೊತೆಗೆ ಅಪಾರ ಗೌರವವನ್ನೂ ತಂದುಕೊಡುವ ಸರ್ಕಾರಿ ಉದ್ಯೋಗಳು ಇವು.

IAS ಅಥವಾ IPS 

ಈ ಎರಡೂ ಹುದ್ದೆಗಳು ದೇಶದ ಪ್ರಗತಿ ಮತ್ತು ಸರಿಯಾದ ನಿರ್ವಹಣೆಗೆ ಬಹಳ ಮುಖ್ಯ. IPS ಅನ್ನು ಪೊಲೀಸ್ ವರಿಷ್ಠಾಧಿಕಾರಿಯಾಗಿ ಮತ್ತು IAS ಅನ್ನು ಕಲೆಕ್ಟರ್ ಕಮ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಪೋಸ್ಟ್ ಮಾಡಲಾಗಿದೆ. ಈ ಹುದ್ದೆಗೆ ಅಭ್ಯರ್ಥಿಗಳ ಆಯ್ಕೆಯನ್ನು UPSC ಅಡಿಯಲ್ಲಿ ಮಾಡಲಾಗುತ್ತದೆ.

ಏಳನೇ ವೇತನ ಆಯೋಗದ ಅಡಿಯಲ್ಲಿ IAS ಮತ್ತು IPSಗೆ ಸಂಬಳ ಲಭ್ಯವಿದೆ. ಇದರಲ್ಲಿ ಆರಂಭಿಕ ವೇತನವು ತಿಂಗಳಿಗೆ 56,100 ರೂಪಾಯಿ. ಕೆಲವು ತಿಂಗಳ ನಂತರ ಸಂಬಳ 1 ಲಕ್ಷದ ಮೇಲೆ ತಲುಪುತ್ತದೆ. ಇದಲ್ಲದೇ ಪ್ರಯಾಣ, ಆರೋಗ್ಯ, ವಸತಿ ಸೇರಿದಂತೆ ಹಲವು ರೀತಿಯ ಭತ್ಯೆಗಳು ಲಭ್ಯವಿವೆ.

NDA ಮತ್ತು ರಕ್ಷಣಾ ಸೇವೆಗಳು

ಭಾರತೀಯ ಸೇನೆಯ ಮೂರು ವಿಭಾಗಗಳೆಂದರೆ ನೌಕಾಪಡೆ, ವಾಯುಸೇನೆ ಮತ್ತು ಭೂಸೇನೆ. ಇವು ಸವಾಲಿನ ಕೆಲಸಗಳನ್ನು ನಿರ್ವಹಿಸುತ್ತವೆ. ಇವುಗಳಲ್ಲಿ ಲೆಫ್ಟಿನೆಂಟ್ ಹುದ್ದೆಗಳಿಗೆ UPSC ಅಡಿಯಲ್ಲಿ NDA, CDS, AFCAT ಇತ್ಯಾದಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಲೆಫ್ಟಿನೆಂಟ್‌ನ ಆರಂಭಿಕ ವೇತನ 68,000 ರೂಪಾಯಿ ಇರುತ್ತದೆ. ಬಡ್ತಿ ಪಡೆದು ಮೇಜರ್ ಆದ ಮೇಲೆ 1 ಲಕ್ಷ ರೂಪಾಯಿ ಸಂಬಳದ ಜೊತೆಗೆ ಹಲವು ಭತ್ಯೆಗಳನ್ನು ನೀಡಲಾಗುತ್ತದೆ.

ISRO, DRDO ವಿಜ್ಞಾನಿ ಮತ್ತು ಇಂಜಿನಿಯರ್

ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಆಸಕ್ತಿ ಹೊಂದಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳು ISRO ಮತ್ತು DRDOಗಳಲ್ಲಿ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಾಗಬಹುದು. ಈ ಸಂಸ್ಥೆಗಳಲ್ಲಿ ಕೆಲಸ ಮಾಡುವುದರಿಂದ ಸಮಾಜದಲ್ಲಿ ಗೌರವ ಸಿಗುತ್ತದೆ. ಮಾಹಿತಿ ಪ್ರಕಾರ ಇವರ ಆರಂಭಿಕ ವೇತನ 60 ಸಾವಿರ ರೂಪಾಯಿಗಳಷ್ಟಿದ್ದು, ನಂತರ ಏರಿಕೆಯಾಗುತ್ತದೆ.

ಆರ್‌ಬಿಐ ಗ್ರೇಡ್ ಬಿ

ನೀವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದರೆ, ನಿಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಆರ್‌ಬಿಐ ಗ್ರೇಡ್ ಬಿ ಅತ್ಯುತ್ತಮ ಆಯ್ಕೆಯಾಗಿದೆ. ಇದಕ್ಕಾಗಿ ಆರ್‌ಬಿಐ ಪ್ರತ್ಯೇಕ ಪರೀಕ್ಷೆ ನಡೆಸುತ್ತದೆ. ಆಯ್ಕೆಯಾದ ಅಭ್ಯರ್ಥಿಗಳ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಸರಕಾರವೇ ಭರಿಸುತ್ತದೆ. ಆರ್‌ಬಿಐ ಗ್ರೇಡ್ ಬಿ ಹುದ್ದೆಗೆ ಆರಂಭಿಕ ವೇತನ ತಿಂಗಳಿಗೆ 67,000 ರೂಪಾಯಿ ಇದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read