ಬ್ಯುಸಿನೆಸ್‌ನಲ್ಲಿ ಎತ್ತಿದ ಕೈ ಮಹೇಂದ್ರ ಸಿಂಗ್‌ ಧೋನಿಯ ಅತ್ತೆ, 800 ಕೋಟಿ ವ್ಯವಹಾರದ ಒಡತಿ ಈಕೆ…..!

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಉತ್ತಮ ಬ್ಯುಸಿನೆಸ್‌ಮನ್‌ ಕೂಡ. ತಮ್ಮನ್ನು ಅನೇಕ ರೀತಿಯ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಧೋನಿಯ ಬಹುತೇಕ ಉದ್ಯಮಗಳನ್ನು ಮುನ್ನಡೆಸುತ್ತಿರುವವರು ಅವರ ಅತ್ತೆ ಶೀಲಾ ಸಿಂಗ್. ಮಹೇಂದ್ರ ಸಿಂಗ್‌ ಧೋನಿ ಅವರ ಪತ್ನಿ ಸಾಕ್ಷಿಯ ತಾಯಿ ಶೀಲಾ ಸಿಂಗ್, 800 ಕೋಟಿ ಮೌಲ್ಯದ ಕಂಪನಿಗೆ ಒಡತಿ. ಅವರ ಬಳಿ ಕೋಟಿಗಟ್ಟಲೆ ಸಂಪತ್ತು ಇದೆ.

ಶೀಲಾ ಸಿಂಗ್, ಧೋನಿಯ ಚಲನಚಿತ್ರ ನಿರ್ಮಾಣ ಕಂಪನಿ ಧೋನಿ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯಸ್ಥೆ ಮತ್ತು ಸಿಇಒ ಕೂಡ ಆಗಿದ್ದಾರೆ. ಮಗಳು ಸಾಕ್ಷಿ ಸಿಂಗ್ ಜೊತೆ ಸೇರಿ ಈ ವ್ಯವಹಾರವನ್ನು ನಿರ್ವಹಿಸುತ್ತಾರೆ. ಮಹೇಂದ್ರ ಸಿಂಗ್ ಧೋನಿ ನಾಲ್ಕು ವರ್ಷಗಳ ಹಿಂದೆ, ಧೋನಿ ಎಂಟರ್‌ಟೈನ್ಮೆಂಟ್‌ ಪ್ರೈವೇಟ್ ಲಿಮಿಟೆಡ್ ಅನ್ನು ಆರಂಭಿಸಿದ್ರು. ಸಾಕ್ಷಿ ಮತ್ತವರ ತಾಯಿ ಜೊತೆಯಾಗಿ ಈ ವ್ಯವಹಾರವನ್ನು 800 ಕೋಟಿ ರೂಪಾಯಿಗೆ ಏರಿಸಿದ್ದಾರೆ.

ಸಾಕ್ಷಿ, ಎಂಎಸ್ ಧೋನಿ ಒಡೆತನದ ಈ ಕಂಪನಿಯ ಪ್ರಮುಖ ಷೇರುದಾರರು. ಎಂಎಸ್ ಧೋನಿ ಅವರ ಅತ್ತೆ ಶೀಲಾ ಸಿಂಗ್ ಇದೇ ಮೊದಲ ಬಾರಿಗೆ ವ್ಯವಹಾರವನ್ನು ನಿರ್ವಹಿಸುತ್ತಿದ್ದಾರೆ. ಅದಕ್ಕೂ ಮೊದಲು ಆಕೆ  ಗೃಹಿಣಿಯಾಗಿದ್ದರು. ಖಾಸಗಿ ಟೀ ಸ್ಟಾಲ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಧೋನಿ ಅವರ ಮಾವ ಪಾನ್ ಸಿಂಗ್ ಅವರ ಸಹೋದ್ಯೋಗಿಯಾಗಿದ್ದರು. ಎಂಎಸ್ ಧೋನಿ ಪ್ರೊಡಕ್ಷನ್ಸ್ ಪ್ರಸ್ತುತ LGM-ಲೆಟ್ಸ್ ಗೆಟ್ ಮ್ಯಾರಿಡ್ ಎಂಬ ಚಿತ್ರವನ್ನು ನಿರ್ಮಿಸುತ್ತಿದೆ. ಇದಕ್ಕೂ ಮೊದಲು ದಿ ಲಯನ್ ಆಫ್ ದಿ ಲಯನ್ ಕೂಡ ನಿರ್ಮಾಣವಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read