
ಇದೇ ಜೂನ್ 1 ರಿಂದ ಉಳಿತಾಯ ಮತ್ತು ಚಾಲ್ತಿ ಖಾತೆಯಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಈ ಬದಲಾವಣೆಯು ಕ್ಲೈಮ್ ಮಾಡದ ಠೇವಣಿಗಳಿಗೆ ಸಂಬಂಧಿಸಿದೆ. ಇದಕ್ಕಾಗಿ ಆರ್.ಬಿ.ಐ. 100 ದಿನಗಳ ಅಭಿಯಾನ ಆರಂಭಿಸಿದೆ. ಈ ಕಾಲಮಿತಿಯೊಳಗೆ ಬ್ಯಾಂಕುಗಳು ಈ ಠೇವಣಿಗಳನ್ನು ಇತ್ಯರ್ಥಪಡಿಸಬೇಕಾಗುತ್ತದೆ.
ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಉಳಿತಾಯ ಮತ್ತು ಚಾಲ್ತಿ ಖಾತೆಯಲ್ಲಿ 10 ವರ್ಷಗಳವರೆಗೆ ಕಾರ್ಯನಿರ್ವಹಿಸದೆ ಉಳಿದಿರುವ ಮೊತ್ತ ಅಥವಾ ಮುಕ್ತಾಯ ದಿನಾಂಕದಿಂದ 10 ವರ್ಷಗಳೊಳಗೆ ಯಾರೂ ಅದನ್ನು ಕ್ಲೈಮ್ ಮಾಡದಿದ್ದರೆ, ಅದನ್ನು ಕ್ಲೈಮ್ ಮಾಡದ ಠೇವಣಿ ಎಂದು ಪರಿಗಣಿಸಲಾಗುತ್ತದೆ. ಮಾರ್ಗಸೂಚಿ ಪ್ರಕಾರ, ಜೂನ್ 1 ರಿಂದ, ಅದನ್ನು ಬ್ಯಾಂಕ್‌ಗಳು ಇತ್ಯರ್ಥಪಡಿಸಬೇಕು. ಈ ಮೊತ್ತವನ್ನು ಬ್ಯಾಂಕುಗಳು RBI ಅಡಿಯಲ್ಲಿ ರಚಿಸಲಾದ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ (DEA) ನಿಧಿಗೆ ವರ್ಗಾಯಿಸುತ್ತವೆ.
ಇತ್ತೀಚೆಗೆ ಆರ್.ಬಿ.ಐ ಹಲವು ಬ್ಯಾಂಕ್‌ಗಳಲ್ಲಿ ಕ್ಲೈಮ್ ಮಾಡದ ಠೇವಣಿಗಳನ್ನು ಪತ್ತೆ ಮಾಡಲು ವೆಬ್ ಪೋರ್ಟಲ್ ಅನ್ನು ತಂದಿದೆ. ಏಪ್ರಿಲ್ 2023 ರಲ್ಲಿ, ಠೇವಣಿದಾರರ ಹಣದ ಭದ್ರತೆಯ ದೃಷ್ಟಿಯಿಂದ, ಆರ್.ಬಿ.ಐ ಅಸ್ತಿತ್ವದಲ್ಲಿರುವ ಕ್ಲೈಮ್ ಮಾಡದ ಠೇವಣಿ ಮೊತ್ತವನ್ನು ಅದರ ನಿಜವಾದ ಮಾಲೀಕರಿಗೆ ಹಿಂದಿರುಗಿಸಲು ಮುಂದಾಗಿತ್ತು. ಈ ಕಾರಣಕ್ಕಾಗಿ, ಆರ್.ಬಿ.ಐ ಇತ್ತೀಚೆಗೆ ಹಲವಾರು ಬ್ಯಾಂಕ್‌ಗಳಲ್ಲಿ ಕ್ಲೈಮ್ ಮಾಡದ ಠೇವಣಿಗಳನ್ನು ಪತ್ತೆಹಚ್ಚಲು ವೆಬ್ ಪೋರ್ಟಲ್ ರಚಿಸಲು ನಿರ್ಧರಿಸಿದೆ.
ಕ್ಲೈಮ್ ಮಾಡದ ಠೇವಣಿಗಳಿಗಾಗಿ ಈ ವೆಬ್ ಪೋರ್ಟಲ್ ಮೂರ್ನಾಲ್ಕು ತಿಂಗಳಲ್ಲಿ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಆರ್.ಬಿ.ಐ ಡೆಪ್ಯುಟಿ ಗವರ್ನರ್ ರಾಜೇಶ್ವರ್ ರಾವ್ ಹೇಳಿದ್ದರು. ಬಳಿಕ ಮೇ 12 ರಂದು, ಆರ್.ಬಿ.ಐ ಈ ಹಕ್ಕು ಪಡೆಯದ ಠೇವಣಿಗಳನ್ನು ಕಂಡುಹಿಡಿಯಲು ‘100 ದಿನ್ 100 ಪೇ’ ಅಭಿಯಾನವನ್ನು ಘೋಷಿಸಿತು. ಇದರ ಅಡಿಯಲ್ಲಿ, ದೇಶದ ಪ್ರತಿ ಜಿಲ್ಲೆಯ ಪ್ರತಿಯೊಂದೂ ಬ್ಯಾಂಕ್ 100 ಕ್ಲೈಮ್ ಮಾಡದ ಠೇವಣಿಗಳನ್ನು 100 ದಿನಗಳಲ್ಲಿ ಪಾವತಿಸಬೇಕಾಗುತ್ತದೆ.
ಜೂನ್ 1, 2023 ರಿಂದ ಈ ಅಭಿಯಾನವನ್ನು ಪ್ರಾರಂಭಿಸಲು ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ. ಇಂತಹ ಕ್ಲೈಮ್ ಮಾಡದ ಠೇವಣಿಗಳನ್ನು ಕ್ಲೈಮ್ ಮಾಡಲು ಸಂಬಂಧಿಸಿದ ಬ್ಯಾಂಕ್‌ಗಳನ್ನು ಗುರುತಿಸಲು ಮತ್ತು ಸಂಪರ್ಕಿಸಲು ಆರ್‌ಬಿಐ ಜಾಗೃತಿ ಅಭಿಯಾನಗಳ ಮೂಲಕ ಕಾಲಕಾಲಕ್ಕೆ ಸಂಪರ್ಕಿಸುತ್ತಿದೆ.

 
			 
		 
		 
		 
		 Loading ...
 Loading ... 
		 
		