ರೀಲ್ಸ್ ಮಾಡಲು ಚಲಿಸುತ್ತಿದ್ದ ಬುಲೆಟ್ ಮೇಲೆ ಬಿಯರ್ ಕುಡಿಯುತ್ತಾ ಬೈಕ್ ಚಾಲನೆ ಮಾಡ್ತಿದ್ದ ಯುವಕನಿಗೆ ಪೊಲೀಸರು 31 ಸಾವಿರ ರೂಪಾಯಿ ದಂಡ ಹಾಕಿದ್ದಾರೆ.
ಗಾಜಿಯಾಬಾದ್ನ ದೆಹಲಿ-ಮೀರತ್ ಎಕ್ಸ್ಪ್ರೆಸ್ವೇಯಲ್ಲಿ ಬುಲೆಟ್ ಚಾಲನೆ ಮಾಡುವಾಗ ಯುವಕನೊಬ್ಬ ಬಿಯರ್ ಕುಡಿಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ವೈರಲ್ ಆದ ವಿಡಿಯೋವನ್ನು ಗಮನಿಸಿದ ಸಂಚಾರಿ ಪೊಲೀಸರು ಆರೋಪಿಗೆ 31,000 ರೂ. ದಂಡ ಹಾಕಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ ಬೈಕ್ ಅಸಲತ್ಪುರ ಜಾತವ್ ಬಸ್ತಿ ನಿವಾಸಿ ಅಭಿಷೇಕ್ ಕುಮಾರ್ ಎಂಬ ವ್ಯಕ್ತಿಗೆ ಸೇರಿದ್ದು , ಬೈಕ್ ಚಾಲಕ ನೂರ್ಪುರ ನಿವಾಸಿ ಸುರೇಂದ್ರ ಕುಮಾರ್ ಎಂದು ತಿಳಿದುಬಂದಿದೆ.
ಮಸ್ಸೂರಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ, ಹೆಲ್ಮೆಟ್ ಇಲ್ಲದೆ ಚಾಲನೆ, ಅತಿ ವೇಗದ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
https://twitter.com/meevkt/status/1616498312290631681?ref_src=twsrc%5Etfw%7Ctwcamp%5Etweetembed%7Ctwterm%5E1616498312290631681%7Ctwgr%5E8d5a14508bcac9743b5e54c4bc56883b8870e1c0%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fon-camera-ghaziabad-man-drinks-beer-while-driving-a-bullet-police-sends-31000-challan-after-video-goes-viral