ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿರಲು ಲೇಹ್ ಹಾಗೂ ಲಡಾಖ್ ಪ್ರವಾಸ ಕೈಗೊಳ್ಳಿ

ಬೇಸಿಗೆ ಮೈ ಸುಡ್ತಿದೆ. ಕೆಲಸದ ಜೊತೆ ಸೂರ್ಯನ ಶಾಖ ಸುಸ್ತು ಮಾಡ್ತಿದೆ. ವಾರಾಂತ್ಯದಲ್ಲಿ ಕೂಲ್ ಆಗಲು ಜನ ಪ್ರವಾಸದ ಪ್ಲಾನ್ ಮಾಡ್ತಿದ್ದಾರೆ. ಮೈ ಸುಡುವ ಬೇಸಿಗೆಯಲ್ಲಿ ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡಕ್ಕೆ ಪ್ರವಾಸಿಗರ ದಂಡೇ ಹರಿದು ಬರ್ತಿದೆ. ಲೇಹ್ ಹಾಗೂ ಲಡಾಖ್ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳ.

ಲಡಾಖನ್ನು ಭಾರತದ ಶೀತಲ ಮರುಭೂಮಿ ಎಂದೇ ಕರೆಯಲಾಗುತ್ತದೆ. ಸಮುದ್ರದಿಂದ 3 ಸಾವಿರ 500 ಮೀಟರ್ ಎತ್ತರದಲ್ಲಿದೆ ಈ ಪ್ರದೇಶ. ಉತ್ತರದಲ್ಲಿ ಕುನ್ಲುನ್ ಪರ್ವತ ಹಾಗೂ ದಕ್ಷಿಣದಲ್ಲಿ ಹಿಮಾಚಲದ ಮಧ್ಯೆ ಇರುವ ಲೇಹ್ ಲಡಾಖ್ ನ ದೊಡ್ಡ ಪಟ್ಟಣ. ಪ್ರವಾಸಿಗರನ್ನು ಆಕರ್ಷಿಸುವ ಸ್ಥಳವಿದು.

ರಸ್ತೆ ಮಾರ್ಗ ಅಥವಾ ವಿಮಾನದ ಮೂಲಕ ಮಾತ್ರ ಇಲ್ಲಿಗೆ ಬರಬಹುದು. ಶ್ರೀನಗರ ಹಾಗೂ ಮನಾಲಿ ಎರಡು ಮಾರ್ಗಗಳ ಮೂಲಕ ಪ್ರವಾಸಿಗರು ಲೇಹ್ ತಲುಪಬಹುದು. ಲಡಾಖ್ ಗೆ ಹೋಗುವ ಪ್ಲಾನ್ ನೀವೂ ಮಾಡಿದ್ದರೆ ನುಬ್ರಾ ಕಣಿವೆ ಮತ್ತು ಪಾಂಗೊಂಗ್ ಸರೋವರ ನೋಡದೆ ಬರಬೇಡಿ.

ಮೇ ತಿಂಗಳ ಕೊನೆಯಿಂದ ಸೆಪ್ಟೆಂಬರ್ ವರೆಗೆ ಲಡಾಖ್ ಪ್ರವಾಸಕ್ಕೆ ಪ್ಲಾನ್ ಮಾಡಬಹುದು. ಬೇಸಿಗೆಯಲ್ಲಿ ಇಲ್ಲಿನ ತಾಪಮಾನ 3 ಡಿಗ್ರಿಯಿಂದ 30 ಡಿಗ್ರಿಯವರೆಗಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read