ಬೇಸಿಗೆಯಲ್ಲಿ ಈ ಸೂಪರ್ ಫೇಸ್ ಪ್ಯಾಕ್ ಹಚ್ಚಿ ಮುಖದ ಟ್ಯಾನ್ ನಿವಾರಿಸಿ

ಬಿಸಿಲಿನ ಬೇಗೆ ಶುರುವಾಗಿದೆ. ಮುಖ ಟ್ಯಾನ್ ಆಗುವುದು, ಹೊಳಪು ಕಳೆದುಕೊಳ್ಳುವುದು ಬೇಸಿಗೆಯಲ್ಲಿ ಸಾಮಾನ್ಯವಾಗಿದೆ. ಸ್ವಲ್ಪ ಕೇರ್ ತೆಗೆದುಕೊಂಡರೆ ಬೇಸಿಗೆಯಲ್ಲಿಯೇ ಸಿಗುವ ಹಣ್ಣುಗಳಿಂದ ನಮ್ಮ ಮುಖದ ಅಂದವನ್ನು ಕಾಪಾಡಿಕೊಳ್ಳಬಹುದು.

ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣು ಯಥೇಚ್ಚವಾಗಿ ದೊರಕುತ್ತದೆ. ಇದನ್ನು ತಿನ್ನುವುದರ ಜತೆಗೆ ಮುಖದ ಅಂದವನ್ನು ಕೂಡ ಹೆಚ್ಚಿಸಿಕೊಳ್ಳಬಹುದು.

ಮಾವಿನ ಹಣ್ಣಿನ ತಿರುಳು ಅರ್ಧ ಕಪ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಹಾಲು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದಕ್ಕೆ ಬಾದಾಮಿ ಪುಡಿ ಹಾಗೂ ಓಟ್ಸ್ ಪೌಡರ್ ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಫೇಸ್ ಪ್ಯಾಕ್ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ಮುಖ ತೊಳೆಯಿರಿ.

½ ಕಪ್ ಮಾವಿನ ಹಣ್ಣಿನ ತಿರುಳಿಗೆ 1 ಟೀ ಸ್ಪೂನ್ ಜೇನುತುಪ್ಪ, 1 ಟೀ ಸ್ಪೂನ್ ಲಿಂಬೆ ಹಣ್ಣಿನ ರಸ ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ. ನಂತರ ಇದನ್ನು ಫೇಸ್ ಪ್ಯಾಕ್ ರೀತಿ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ಮುಖ ತೊಳೆದರೆ ಮುಖ ಕಾಂತಿಯಿಂದ ಮಿನುಗುತ್ತದೆ.

ಅರ್ಧ ಕಪ್ ಮಾವಿನ ಹಣ್ಣಿನ ತಿರುಳಿಗೆ, 3 ಟೀ ಸ್ಪೂನ್ ಮುಲ್ತಾನಿ ಮಿಟ್ಟಿ ಪುಡಿ, 2 ಟೀ ಸ್ಪೂನ್ ನೀರು, 1 ಟೀ ಸ್ಪೂನ್ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ಮುಖ ತೊಳೆಯಿರಿ. ಇದು ಕೂಡ ನಿಮ್ಮ ಮುಖದ ಅಂದವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read