ಬೇಕಾದ ಕಡೆ ಡ್ಯೂಟಿ ಹಾಕಲು 10 ಸಾವಿರ ಲಂಚ, ರಜೆ ನೀಡಲು 500 ರೂಪಾಯಿಗೆ ಬೇಡಿಕೆ; ಕೆ.ಎಸ್.ಆರ್.ಪಿ ಅಧಿಕಾರಿ ಲಂಚಾವತಾರದ ವಿರುದ್ಧ ಸಿಡಿದೆದ್ದ ಹೆಡ್ ಕಾನ್ಸ್ ಟೇಬಲ್

ಬೆಂಗಳೂರು: ಕೆ.ಎಸ್.ಆರ್.ಪಿ ಅಧಿಕಾರಿಗಳ ವಿರುದ್ಧ ಲಂಚದ ಆರೋಪ ಕೇಳಿಬಂದಿದೆ. ಅಧಿಕಾರಿಯ ಲಂಚಾವತಾರಕ್ಕೆ ಹೆಡ್ ಕಾನ್ಸ್ ಟೇಬಲ್ ಓರ್ವರು ಸಿಡಿದೆದ್ದಿದ್ದಾರೆ.

ಬೇಕಾದಕಡೆ ಡ್ಯೂಟಿ ಹಾಕಲು ಹಾಗೂ ರಜೆ ನೀಡಲು ಮಾತ್ರವಲ್ಲ ಡೇ ಶಿಫ್ಟ್, ನೈಟ್ ಶಿಫ್ಟ್ ಹಾಕಲು ಕೂಡ ಕೆ.ಎಸ್.ಆರ್.ಪಿ ಅಧಿಕಾರಿಗಳಿಬ್ಬರು ಲಂಚ ಕೇಳುತ್ತಿರುವುದಾಗಿ ಹೆಡ್ ಕಾನ್ಸ್ ಟೇಬಲ್ ಓಂಕಾರಪ್ಪ ದೂರು ನೀಡಿದ್ದಾರೆ.

ಕೂಡ್ಲು ಬಳಿಯ 9ನೇ ಬ್ಯಾಚ್ ನ ಕೆ.ಎಸ್.ಆರ್.ಪಿ ಹಿರಿಯ ಅಧಿಕಾರಿ ರವಿ, ಆರ್ ಎಸ್ ಐ ಮಹಂತೇಶ್ ಬನ್ನಪ್ಪ ಗೌಡರ್, ಇಷ್ಟಬಂದಕಡೆ ಡ್ಯೂಟಿ ನೀಡಲು ತಿಂಗಳಿಗೆ 10 ಸಾವಿರ ರೂಪಾಯಿ ಲಂಚ ಕೇಳುತ್ತಿದ್ದಾರೆ. ರಜೆ ನೀಡಲು 500 ರೂಪಾಯಿ ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ನೈಟ್ ಡ್ಯೂಟಿ, ಅಥವಾ ಡೇ ಡ್ಯೂಟಿ ಬೇಕೆಂದರೂ ಲಂಚ ಕೊಡಬೇಕು.ಗೂಗಲ್ ಪೇ, ಫೋನ್ ಪೇ ಮೂಲಕ ಹಣ ವಸೂಲಿ ಮಾಡುತ್ತಾರೆ ಎಂದು ಓಂಕಾರಪ್ಪ, ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ನಿಡಿದ್ದಾರೆ.

ಕೆಲ ದಿನಗಳ ಹಿಂದೆ ಕಲಬುರ್ಗಿಯಲ್ಲಿ ಹಿರಿಯ ಅಧಿಕಾರಿಗಳ ವಿರುದ್ಧ ತಮ್ಮನ್ನು ಹಫ್ತಾ ವಸೂಲಿಗೆ ಕಳುಹಿಸುತ್ತಿದ್ದಾರೆ ಎಂದು ಕಾನ್ಸ್ ಟೇಬಲ್ ಗಳು ದೂರು ನೀಡಿದ್ದರು. ಇದರ ಬೆನ್ನಲ್ಲೇ ಕೆ.ಎಸ್.ಆರ್.ಪಿ ಅಧಿಕಾರಿಗಳ ವಿರುದ್ಧ ಈಗ ಲಂಚಾವತಾರದ ದೂರು ಕೇಳಿಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read