ಬಿಳಿ ಬಣ್ಣದ ಬಟ್ಟೆಗಳ ನಿರ್ವಹಣೆ ಸುಲಭವಲ್ಲ

ಶ್ವೇತ ವರ್ಣದ ಉಡುಪನ್ನು ನಿರ್ವಹಣೆ ಮಾಡುವುದು ತುಸು ಕಷ್ಟದ ಕೆಲಸವೇ. ಅದರಲ್ಲೂ ಮಳೆ ಬಂತು ಅಂದ್ರೆ ಮುಗಿದೇಹೋಯಿತು. ಹೀಗಾಗಿ ಮಳೆಗಾಲದಲ್ಲಿ ಬಿಳಿ ಬಟ್ಟೆಗಳನ್ನು ತೊಡಲು ಹೆಚ್ಚಾಗಿ ಯಾರೂ ಇಷ್ಟಪಡುವುದಿಲ್ಲ.

ಶ್ವೇತ ವರ್ಣದ ಉಡುಪುಗಳನ್ನು ಹೇಗೆ ಮೆಂಟೇನ್ ಮಾಡಬೇಕು ಅನ್ನುವ ಟಿಪ್ಸ್ ಇಲ್ಲಿದೆ.

* ಮಳೆಗಾಲದಲ್ಲಿ ಬಿಳಿ ಸೀರೆಗಳನ್ನು ಹೆಚ್ಚು ಉದ್ದವಾಗಿ ಉಡಬಾರದು. ಹೀಗೆ ಮಾಡುವುದರಿಂದ ಸೀರೆಯ ಅಂಚು ನೆಲಕ್ಕೆ ತಾಗುವುದಿಲ್ಲ. ಹಾಗೂ ಕೆಸರು ಅಂಟುವುದಿಲ್ಲ.

* ಬಿಳಿ ಬಟ್ಟೆಗಳಿಗೆ ಸಣ್ಣ ಪುಟ್ಟ ಕಲೆಗಳಾಗಿದ್ದರೆ, ಕಲೆಗಳ ಮೇಲೆ ಟಾಲ್ಕಂ ಪೌಡರನ್ನು ಸವರಿ, ಅದರ ಮೇಲೆ ಬ್ಲಾಟಿಂಗ್‌ ಪೇಪರನ್ನಿಟ್ಟು ಚೆನ್ನಾಗಿ ತಿಕ್ಕಿದರೆ, ಕಲೆಗಳು ನಾಶವಾಗುತ್ತವೆ.

* ಬಿಳಿ ಬಟ್ಟೆಗಳನ್ನು ವಾಷಿಂಗ್‌ ಮೆಶಿನ್‌ ನಲ್ಲಿ ಒಗೆಯುವ ಮುನ್ನ ಶರ್ಟ್‌ನ ಕೈ ತೋಳು, ಕಂಕುಳು, ಕಾಲರ್‌ ಭಾಗವನ್ನು ಮೊದಲೇ ಬ್ರಷ್‌ನಿಂದ ಉಜ್ಜಿ ಆನಂತರ ಒಗೆಯಲು ಹಾಕಬೇಕು.

* ಅಪರೂಪವಾಗಿ ಬಳಸುವ ಬಟ್ಟೆಗಳ ನಡುವೆ ಕರ್ಪೂರದ ಉಂಡೆಗಳನ್ನಿಟ್ಟರೆ, ಬಟ್ಟೆಗಳು ಸುವಾಸನಾ ಭರಿತವಾಗಿರುತ್ತವೆ.

* ಗಾಢವಾದ ಕಲೆಯಾದಂತಹ ಜಾಗದಲ್ಲಿ ಆಲಿವ್‌ ಎಣ್ಣೆಯನ್ನಾಗಲೀ ಅಥವಾ ಕೊಬ್ಬರಿ ಎಣ್ಣೆಯನ್ನಾಗಲೀ ಹಚ್ಚಿ, ಸ್ವಲ್ಪ ಸಮಯದ ನಂತರ, ಬಿಸಿ ನೀರಿನಲ್ಲಿ ಸೋಪಿನಿಂದ ತೊಳೆದರೆ, ಕಲೆಗಳು ಸಂಪೂರ್ಣವಾಗಿ ನಾಶವಾಗುತ್ತವೆ.

* ಬೆವರಿನ ಕಲೆಗಳಿದ್ದರೆ, ನೀರಿಗೆ ನಿಂಬೆರಸವನ್ನು ಹಾಕಿ, ಆ ನೀರನ್ನು ಸ್ಪಂಜಿನಿಂದ ಕಲೆಯಿರುವ ಜಾಗದಲ್ಲಿ ಒರೆಸಿದರೆ, ಕಲೆಗಳು ಕಾಣಿಸುವುದಿಲ್ಲ.

* ಬಿಳಿ ಬಟ್ಟೆಗಳ ಮೇಲೆ ಕಬ್ಬಿಣದ ತುಕ್ಕುಗಳ ಕಲೆಯುಂಟಾಗಿದ್ದಲ್ಲಿ, ಕಲೆಯುಂಟಾದ ಜಾಗವನ್ನು ಮೊದಲು ಹಾಲಿನಲ್ಲಿ ಅದ್ದಬೇಕು. ನಂತರ ಅದರ ಮೇಲೆ ಪುಡಿ ಉಪ್ಪನ್ನು ಹಾಕಿ ಚೆನ್ನಾಗಿ ಉಜ್ಜಿ ನೀರಿನಿಂದ ತೊಳೆದರೆ ಕಲೆ ಮಾಯವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read