ಬಿಳಿ ಕೂದಲನ್ನು ಕಪ್ಪು ಮಾಡಲು ಇಲ್ಲಿದೆ ಸುಲಭ ವಿಧಾನ

ಸಣ್ಣ ವಯಸ್ಸಿನಲ್ಲೇ ನಿಮ್ಮ ಕೂದಲು ಬಿಳಿಯಾಗಿದೆಯೇ…? ಇದಕ್ಕೆ ಹಾರ್ಮೋನ್ ಬದಲಾವಣೆ ಕಾರಣವಾದರೆ ನೀವು ಅಸಹಾಯಕರು. ಅದರ ಹೊರತಾಗಿ ಕಾಳಜಿಯ ಕೊರತೆ ಅಥವಾ ಒತ್ತಡದಿಂದಾಗಿ ಕೂದಲು ಬಿಳಿಯಾಗಿದ್ದರೆ ಅದನ್ನು ಕಪ್ಪಾಗಿಸುವ ಬಗೆಯನ್ನು ತಿಳಿಯೋಣ.

ಸಣ್ಣ ವಯಸ್ಸಿನಲ್ಲಿ ವಿಪರೀತ ಜೆಲ್ ಬಳಸಿದ ಕಾರಣಕ್ಕೆ ನಿಮ್ಮ ಕೂದಲು ಬೆಳ್ಳಗಾಗಿರಬಹುದು. ಇದನ್ನು ನಿವಾರಿಸಲು ಕಹಿಬೇವಿನ ಎಣ್ಣೆ ಬಳಸಿ. ಇದು ಕೂದಲು ಬಿಳಿಯಾಗದಂತೆ ತಡೆಯುತ್ತದೆ. ಕಹಿಬೇವಿನ ಎಣ್ಣೆಗೆ ಬಾದಾಮಿ ಎಣ್ಣೆ ಸೇರಿಸಿ. ಎರಡನ್ನೂ ಸಮಪ್ರಮಾಣದಲ್ಲಿ ಬಳಸಿ. ಕೂದಲಿನ ಬುಡದಿಂದ ತುದಿಯವರೆಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ.

ವಾರದಲ್ಲಿ ಮೂರು ಬಾರಿ ಹೀಗೆ ಮಾಡುವುದರಿಂದ ತಿಂಗಳೊಳಗೆ ನಿಮ್ಮ ಬಿಳಿಯಾದ ಕೂದಲು ಕಪ್ಪಾಗುತ್ತದೆ. ನೆಲ್ಲಿಕಾಯಿ ಪುಡಿಗೆ ಕಹಿಬೇವಿನ ಎಣ್ಣೆ ಸೇರಿಸಿ ಹೀಗೆ ಮಾಡಿದರೂ ಕೂದಲಿನ ಸಮಸ್ಯೆ ಪರಿಹಾರವಾಗುತ್ತದೆ.

ಸಂಪೂರ್ಣ ತಲೆ ಕೂದಲು ಬಿಳಿಯಾಗಿದ್ದರೆ ಈ ಮನೆಮದ್ದುಗಳು ಹೆಚ್ಚಿನ ಪ್ರಭಾವ ಬೀರುವುದಿಲ್ಲ. ಹಾಗಾಗಿ ಆರಂಭದ ಹಂತದಲ್ಲೇ ಈ ಮನೆಮದ್ದನ್ನು ಪ್ರಯೋಗಿಸಿ ನೋಡಿ. ಸಂಪೂರ್ಣ ಬಿಳಿಯಾಗಿದ್ದರೆ ನೈಸರ್ಗಿಕ ಹೇರ್ ಡೈ ಬಳಸುವುದೇ ಒಳ್ಳೆಯದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read