ಬಾಲಿವುಡ್‌ ಗೆ ಹಾರಿದ ʼಕಾಂತಾರʼ ದ ಸಪ್ತಮಿ ಗೌಡ; ʼದಿ ವ್ಯಾಕ್ಸಿನ್‌ ವಾರ್‌ʼನಲ್ಲಿ ಸಿಕ್ತು ಚಾನ್ಸ್‌…!

ಸೂಪರ್‌ ಹಿಟ್‌ ಚಿತ್ರ ʼಕಾಂತಾರʼ ಮೂಲಕ ಮನೆಮಾತಾಗಿರುವ ನಟಿ ಸಪ್ತಮಿ ಗೌಡ ಬಾಲಿವುಡ್‌ಗೆ ಹಾರಲು ಸಜ್ಜಾಗಿದ್ದಾರೆ. ʼಕಾಶ್ಮೀರ್‌ ಫೈಲ್ಸ್‌ʼ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಮುಂದಿನ ಚಿತ್ರ ʼದಿ ವ್ಯಾಕ್ಸಿನ್ ವಾರ್‌ʼನಲ್ಲಿ ಸಪ್ತಮಿ ನಟಿಸಲಿದ್ದಾರೆ.

ಈಗಾಗ್ಲೇ ಸಿನೆಮಾದ ಶೂಟಿಂಗ್‌ ಕೂಡ ಶುರುವಾಗಿದೆ. ಕಾಂತಾರದಲ್ಲಿ ರಿಷಬ್ ಶೆಟ್ಟಿಗೆ ನಾಯಕಿಯಾಗಿ ಸಪ್ತಮಿ ನಟಿಸಿದ್ದರು. ಇದೀಗ ಬಾಲಿವುಡ್‌ನಲ್ಲಿ ಅವಕಾಶ ನೀಡಿರುವ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರಿಗೆ ಸಪ್ತಮಿ ಧನ್ಯವಾದ ಅರ್ಪಿಸಿದ್ದಾರೆ.

ಸಪ್ತಮಿ ಮಾಡಿರೋ ಪೋಸ್ಟ್‌ಗೆ ಉತ್ತರಿಸಿರೋ ನಿರ್ದೇಶಕರು, #TheVaccineWar ನಲ್ಲಿ ನಿಮ್ಮ ಪಾತ್ರವು ಅನೇಕ ಹೃದಯಗಳನ್ನು ಮುಟ್ಟುತ್ತದೆ ಎಂದಿದ್ದಾರೆ. ವ್ಯಾಕ್ಸಿನ್‌ ವಾರ್‌ ಚಿತ್ರ, ಭಾರತೀಯ ವಿಜ್ಞಾನಿಗಳು ಮತ್ತು ಕೋವಿಡ್ ವಿರುದ್ಧ ಲಸಿಕೆಯನ್ನು ಅಭಿವೃದ್ಧಿಪಡಿಸಲು ಎರಡು ವರ್ಷಗಳಿಂದ ಸತತ ಪರಿಶ್ರಮಪಟ್ಟಿರುವರನ್ನು ಆಧರಿಸಿದೆ.

ಇದು ಜಾಗತಿಕ ತಯಾರಕರ ಒತ್ತಡದ ನಡುವೆಯೂ ದೇಶವಾಸಿಗಳ ಜೀವ  ಉಳಿಸಲು ಶ್ರಮಿಸಿದ ಭಾರತೀಯ ವಿಜ್ಞಾನಿಗಳ ಕಥೆಯನ್ನು ಬಿಚ್ಚಿಡಲಿದೆ. ವಿವೇಕ್ ರಂಜನ್ ಅಗ್ನಿಹೋತ್ರಿ ಈ ಚಿತ್ರವನ್ನು ಆಗಸ್ಟ್ 15ರಂದು ರಿಲೀಸ್‌ ಮಾಡಲು ಪ್ಲಾನ್‌ ಹಾಕಿಕೊಂಡಿದ್ದಾರೆ. ವ್ಯಾಕ್ಸಿನ್ ವಾರ್ 11 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read