ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಬಿಡುಗಡೆಯಾಗಾಗಿನಿಂದ ಭರ್ಜರಿ ಸೌಂಡ್ ಮಾಡುತ್ತಿದೆ.
ಕಳೆದ ತಿಂಗಳು ಜನವರಿ 25ರಂದು ತೆರೆಕಂಡಿದ್ದ ಈ ಚಿತ್ರ ಇದೀಗ 850 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.
ಸಾಕಷ್ಟು ಸೋಲಿನ ನಂತರ ಶಾರುಖ್ ಖಾನ್ ಇದೀಗ ಮತ್ತೊಮ್ಮೆ ಕಿಂಗ್ ಆಗಿ ಹೊರಹೊಮ್ಮಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ‘RRR’ಹಾಗೂ ‘ಕೆ ಜಿ ಎಫ್ 2’ ದಾಖಲೆಯನ್ನು ಉಡೀಸ್ ಮಾಡಲು ಪಠಾಣ್ ಸಜ್ಜಾಗಿದೆ.
ಸಿದ್ದಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್ ಖಾನ್ ಸೇರಿದಂತೆ ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಿಂ, ಡಿಂಪಲ್ ಕಪಾಡಿಯ, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ರಾಜ್ ಫಿಲಂಸ್ ಬ್ಯಾನರ್ ನಡಿ ಆದಿತ್ಯ ಚೋಪ್ರಾ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
Including re-releases, #RRRMovie has done $14,861,603 in #NorthAmerica #Pathaan has already entered $14 Million club there..
Will cross #RRR soon..
— Ramesh Bala (@rameshlaus) February 6, 2023
#Pathaan clearing ₹ 500 Crs gross in India and ₹ 800 Crs globally at the end of 2nd Sunday..
— Ramesh Bala (@rameshlaus) February 5, 2023