ಬಹುಕಾಲದ ಗೆಳತಿಯೊಡನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಅಭಿಷೇಕ್ ಅಂಬರೀಶ್’

Abhishek Aviva Wedding Photos: ಅಭಿಷೇಕ್ ಅಂಬರೀಶ್-ಅವಿವಾ ಬಿದ್ದಪ್ಪ ಮದುವೆ​ಬೆಂಗಳೂರು : ಮಂಡ್ಯದ ಗಂಡು, ನಟ ರೆಬೆಲ್‌ ಸ್ಟಾರ್ ಅಂಬರೀಶ್‌ (Rebel star Ambareesh) ಪುತ್ರನ ವಿವಾಹ (marriage) ಇಂದು ನೆರವೇರಿತು. ಹೌದು, ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಳೆದ ಮೂರು ನಾಲ್ಕು ದಿನಗಳಿಂದ ಇಬ್ಬರ ಮದುವೆ ಕಾರ್ಯಕ್ರಗಳು ನಡೆದಿದ್ದು, ಇಂದು ಬೆಂಗಳೂರಿನ ಪ್ಯಾಲೇಜ್ ಗ್ರೌಂಡ್ನ (Palace Ground) ಮಾಣಿಕ್ಯ ಚಾಮರ ವಜ್ರದಲ್ಲಿ ಅದ್ದೂರಿಯಾಗಿ ಮದುವೆ ನಡೆಯಿತು.

ಒಕ್ಕಲಿಗ ಸಂಪ್ರದಾಯದಂತೆ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಮದುವೆ ಸಮಾರಂಭ ನಡೆದಿದ್ದು, ಇಂದು ಬೆಳಗ್ಗೆ 9.30 ರಿಂದ 10.30ರ ವರೆಗಿನ ಶುಭ ಮುಹೂರ್ತದಲ್ಲಿ ಅವಿವಾಗೆ ಅಭಿಷೇಕ್ ತಾಳಿ ಕಟ್ಟಿದ್ದಾರೆ.

ಮದುವೆ ಕಾರ್ಯಕ್ರಮದ ಉಸ್ತುವಾರಿಯನ್ನು ರಾಕ್‌ ಲೈನ್ ವೆಂಕಟೇಶ್ (Rockline Venkatesh)‌ ನೋಡಿಕೊಂಡಿದ್ದು, ಹಿರಿಯ ಗಣ್ಯರು, ಸ್ಯಾಂಡಲ್ ವುಡ್ ನಟ, ನಟಿಯರು ಶುಭ ಸಮಾರಂಭಕ್ಕೆ ಸಾಕ್ಷಿಯಾದರು. ಜೂನ್ 16ಕ್ಕೆ ಮಂಡ್ಯದ ಮದ್ದೂರಿನ ಗೆಜ್ಜಲಗೆರೆ ಗ್ರಾಮದಲ್ಲಿ ಬೀಗರ ಔತಣ ಕೂಟ ಏರ್ಪಡಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read