ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ ಗೆಲುವು ಸಾಧಿಸಿದ್ದು, ಮತ ಎಣಿಕೆ ಬಳಿಕ ಈ ಕುರಿತು ಘೋಷಣೆಯಾಗುತ್ತಿದ್ದಂತೆ ಅವರ ಬೆಂಬಲಿಗನೊಬ್ಬ ಖಡ್ಗ ಝಳಪಿಸಿದ್ದ ನಗರದಲ್ಲಿ ಸಂಚರಿಸಿದ್ದ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ವಿಜಯಪುರದ ಗಾಂಧಿ ವೃತ್ತ ಠಾಣೆ ಪೊಲೀಸರು ಖಡ್ಗ ಝಳಪಿಸಿದ್ದ ರಾಜಕುಮಾರ ಹಳ್ಳದಮನಿ ಎಂಬ ಯುವಕನನ್ನು ಈಗ ಬಂಧಿಸಿದ್ದಾರೆ.
ಮತ ಎಣಿಕೆ ಸಂದರ್ಭದಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ ಸಹ ವಿಜಯೋತ್ಸವದ ವೇಳೆ ಖಡ್ಗ ಝಳಪಿಸುತ್ತಾ ಸಾಗಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ನೆಟ್ಟಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೆ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು, ಇದೀಗ ಪೊಲೀಸರು ಯುವಕನನ್ನು ಬಂಧಿಸಿ ಭಾರತೀಯ ಶಸ್ತ್ರಾಸ್ತ್ರ ಕಾಯಿದೆ ಅಡಿ ಪ್ರಕರಣ ದಾಖಲಿಸಿದ್ದಾರೆ.
https://twitter.com/alokkumar6994/status/1657684784028459009?ref_src=twsrc%5Etfw%7Ctwcamp%5Etweetembed%7Ctwterm%5E1657684784028459009%7Ctwgr%5E8800335611aa624dd5cadaacd0f70506fe849b28%7Ctwcon%5Es1_&ref_url=https%3A%2F%2Fwww.kannadaprabha.com%2Fkarnataka%2F2023%2Fmay%2F14%2Fcase-registered-and-accused-has-been-arrested-says-alok-kumar-493827.html