ಫುಟ್ಬಾಲ್ ಆಡುತ್ತಿರುವ ಕಟೀಲು ದೇಗುಲದ ಆನೆ; ವಿಡಿಯೋ ವೈರಲ್

ಪ್ರಾಣಿಗಳ ಫನ್ನಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಹೆಚ್ಚು ವೈರಲ್ ಆಗುವ ಕಂಟೆಂಟ್‌ಗಳು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಾನದ ಗಿರಿಜಾ ಅಕಾ ಮಹಾಲಕ್ಷ್ಮಿ ಹೆಸರಿನ ಆನೆಯು ಮಾವುತರೊಂದಿಗೆ ಫುಟ್ಬಾಲ್ ಮೋಜಿನಲ್ಲಿರುವ ವಿಡಿಯೋವೊಂದು ವೈರಲ್ ಆಗಿದೆ.

ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಈ ಆನೆಯೊಂದಿಗೆ ಸೆಲ್ಫೀ ತೆಗೆದುಕೊಂಡು ಖುಷಿ ಪಡುತ್ತಾರೆ. ಗಿರಿಜಾಗಳನ್ನು 1994ರಲ್ಲಿ ಕಟೀಲಿಗೆ ಕರೆದುಕೊಂಡು ಬರಲಾಗಿದೆಯಂತೆ.

ಫೈರೋಜ಼್ ಹಾಗೂ ಅಲ್ತಾಫ್ ಹೆಸರಿನ ಮಾವುತರು ಗಿರಿಜಾಳನ್ನು ತರಬೇತುಗೊಳಿಸಿದ್ದಾರೆ. ಕಳೆದ ಎಂಟು ತಿಂಗಳಿನಿಂದ ಆನೆಯು ಕ್ರಿಕೆಟ್ ಹಾಗೂ ಫುಟ್ಬಾಲ್‌ಗಳನ್ನು ಆಡಿ ಖುಷಿ ಪಡುತ್ತಿದೆ ಎಂದು ದೇವಸ್ಥಾನದ ಸಿಬ್ಬಂದಿ ತಿಳಿಸಿದ್ದಾರೆ. ಪ್ರತಿನಿತ್ಯ ಆನೆಯು ಎರಡು ಗಂಟೆಗಳ ಕಾಲ ಆಟವಾಡುತ್ತದೆ ಎಂದು ತಿಳಿದು ಬಂದಿದೆ.

ಇದಕ್ಕೂ ಮುನ್ನ ದೇವಸ್ಥಾನದಲ್ಲಿ ನಾಗರಾಜ ಹೆಸರಿನ ಗಂಡು ಆನೆ ಇತ್ತು. ಆದರೆ ನಾಗರಾಜ ಕಾಲವಾದ ಬಳಿಕ ಮಹಾಲಕ್ಷ್ಮಿಯನ್ನು ದೇವಸ್ಥಾನಕ್ಕೆ ಕರೆತರಲಾಗಿದೆ. ಬಾಲಕರೊಂದಿಗೆ ಕ್ರಿಕೆಟ್ ಆಡುತ್ತಿರುವ ಮಹಾಲಕ್ಷ್ಮಿಯ ವಿಡಿಯೋಗಳು ಇದಕ್ಕೂ ಮುನ್ನ ವೈರಲ್ ಆಗಿದ್ದವು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read