ಫಟಾ ಫಟ್‌ ತೂಕ ಇಳಿಸುತ್ತೆ ಈ ಬ್ಲೂ ಟೀ; ಇದರಲ್ಲಿದೆ ಇನ್ನೂ ಹತ್ತಾರು ಪ್ರಯೋಜನ

ಇತ್ತೀಚಿನ ದಿನಗಳಲ್ಲಿ ಕಾಯಿಲೆಗಳು ಕಾಮನ್‌ ಆಗಿಬಿಟ್ಟಿವೆ. ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಆರೋಗ್ಯ ಸಮಸ್ಯೆ ಕಾಡುತ್ತಿರುತ್ತದೆ. ದೇಹದಲ್ಲಿ ಬೊಜ್ಜು ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಬಹಳ ಕಷ್ಟದ ಕೆಲಸ. ಅನೇಕರು ಜಿಮ್‌ನಲ್ಲಿ ಕಸರತ್ತು ಮಾಡ್ತಾರೆ. ಲಘು ವ್ಯಾಯಾಮ, ಯೋಗಾಸನದ ಮೊರೆ ಹೋಗುತ್ತಾರೆ. ಆಹಾರದಲ್ಲೂ ಬದಲಾವಣೆ ಮಾಡುತ್ತಾರೆ.

ಆದರೆ ಬೇಗನೆ ಕಡಿಮೆಯಾದ ತೂಕವು ಮತ್ತೆ ಹೆಚ್ಚಾಗಬಹುದು. ಅನೇಕರು ತೂಕ ಇಳಿಸಿಕೊಳ್ಳಲು ಗ್ರೀನ್‌ ಟೀಯನ್ನು ಆಶ್ರಯಿಸುತ್ತಾರೆ. ಗ್ರೀನ್‌ ಟೀ ಹೊರತಾಗಿ ದೇಹದ ಕೊಬ್ಬನ್ನು ತ್ವರಿತವಾಗಿ ಕಡಿಮೆ ಮಾಡುವ ಮತ್ತೊಂದು ಚಹಾ ಇದೆ. ‘ಬ್ಲೂ ಟೀ’ ಎಂದು ಕರೆಯಲ್ಪಡುವ ಈ ಚಹಾದ ಬಗ್ಗೆ ಎಷ್ಟೋ ಜನರಿಗೆ ತಿಳಿದಿಲ್ಲ.

ಬ್ಲೂ ಟೀಪ್ರಯೋಜನಗಳು

ಬ್ಲೂ ಬಟರ್‌ಫ್ಲೈ ಹೂವಿನಿಂದ ತಯಾರಾಗುವ ಚಹಾ ಇದು. ಈ ಚಹಾವು ನೋಡಲು ಬಹಳ ಸುಂದರವಾಗಿರುತ್ತದೆ. ಇದರ ರುಚಿಯೂ ಅಷ್ಟೇ ಅದ್ಭುತ. ಈ ಚಹಾವು ನಿಮಗೆ ತ್ವರಿತ ಶಕ್ತಿಯನ್ನು ನೀಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಇದನ್ನು ಪ್ರತಿದಿನ ಸೇವಿಸಿದರೆ ದೇಹದ ಕೊಬ್ಬು ವೇಗವಾಗಿ ಕಡಿಮೆಯಾಗುತ್ತದೆ. ಚಹಾದಲ್ಲಿರುವ ಆ್ಯಂಟಿಒಕ್ಸಿಡೆಂಟ್‌ಗಳು ದೇಹವನ್ನು ರಿಫ್ರೆಶ್ ಮಾಡುತ್ತದೆ ಮತ್ತು ಸೋಮಾರಿತನವನ್ನು ದೂರ ಮಾಡುತ್ತವೆ.

ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ‘ಬ್ಲೂ ಟೀ’ ಮಾನಸಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ. ನೀಲಿ ಚಹಾವನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಬಹುದು. ಇದು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ಬ್ಲೂ ಟೀ ರಾಮಬಾಣವಾಗಿದೆ. ನೀಲಿ ಚಹಾವು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದು ಕಾಲೋಚಿತ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಪ್ರಯೋಜನಕಾರಿ. ಇಷ್ಟೆಲ್ಲಾ ಔಷಧೀಯ ಗುಣಗಳನ್ನು ಹೊಂದಿರುವ ನೀಲಿ ಚಹಾವನ್ನು ನಿಯಮಿತವಾಗಿ ಸೇವನೆ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read