ಪ್ರವಾಸದ ವೇಳೆ ಇವು ಕಣ್ಣಿಗೆ ಬಿದ್ರೆ ನೀಡುತ್ತೆ ಭವಿಷ್ಯದ ಬಗ್ಗೆ ಮುನ್ಸೂಚನೆ

ವಿಷ್ಣು ಪುರಾಣದಲ್ಲಿ ಭವಿಷ್ಯದಲ್ಲಾಗುವ ಸುಖ-ದುಃಖಗಳ ಮುನ್ಸೂಚನೆ ಬಗ್ಗೆ ಹೇಳಲಾಗಿದೆ. ಕೇವಲ ವಿಷ್ಣು ಪುರಾಣ ಮಾತ್ರವಲ್ಲ ಅನೇಕ ಗ್ರಂಥಗಳಲ್ಲಿ, ಘಟನೆಗಳು ಹೇಗೆ ಭವಿಷ್ಯದ ಬಗ್ಗೆ ಮುನ್ಸೂಚನೆ ನೀಡುತ್ತವೆ ಎಂಬುದನ್ನು ಹೇಳಲಾಗಿದೆ. ದಿನದ ಆರಂಭದಲ್ಲಿ ಅಥವಾ ದಿನದಲ್ಲಿ ಕೆಲ ವಸ್ತುಗಳು ನಮ್ಮ ಕಣ್ಣಿಗೆ ಕಂಡ್ರೆ ಆ ದಿನ ಶುಭಕರವಾಗಿರುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಪ್ರವಾಸಕ್ಕೆ ಹೋಗುವ ವೇಳೆ ಅಥವಾ ಶುಭ ಕೆಲಸಕ್ಕೆ ಹೋಗುವ ವೇಳೆ ದಾರಿಯಲ್ಲಿ ಹಸಿರು ಬೆಳೆ ಕಂಡ್ರೆ ಇದು ಶುಭಕರ. ಅದ್ರಲ್ಲೂ ಬೆಳೆದು ನಿಂತ ಪೈರು ಕಣ್ಣಿಗೆ ಬಿದ್ರೆ ಮತ್ತಷ್ಟು ಲಾಭಕರ. ನೀವು ಹೊರಟ ಕೆಲಸ ಯಶಸ್ವಿಯಾಗಲಿದೆ ಎಂದರ್ಥ. ಮುಂದಿನ ದಿನಗಳಲ್ಲಿ ಸುಖ ಪ್ರಾಪ್ತಿಯಾಗಲಿದೆ ಎಂಬ ಸಂಕೇತ.

ಪ್ರಯಾಣ ಬೆಳೆಸುವಾಗ ಹಸು ಕಣ್ಣಿಗೆ ಕಂಡ್ರೆ ಬಹಳ ಒಳ್ಳೆಯದು. ಹಸು ಕಂಡ್ರೆ ಪುಣ್ಯ ಪ್ರಾಪ್ತಿಯಾದಂತೆ ಎಂದು ನಂಬಲಾಗಿದೆ. ಅದ್ರಲ್ಲೂ ಹಸು ನಿಂತ ಜಾಗವನ್ನು ಕಾಲಿನಲ್ಲಿ ಕೆರೆಯುತ್ತಿದ್ದು, ಧೂಳು ಇಡೀ ಪ್ರದೇಶವನ್ನು ಹರಡಿ, ಅದು ನಿಮ್ಮ ಕಣ್ಣಿಗೆ ಕಂಡ್ರೆ ಮತ್ತಷ್ಟು ಶುಭ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read