ಪ್ರಧಾನಿಯಾದಾಗಿನಿಂದಲೂ ನಯಾ ಪೈಸೆ ವೈದ್ಯಕೀಯ ವೆಚ್ಚ ಪಡೆದಿಲ್ಲ ನರೇಂದ್ರ ಮೋದಿ…!

ಚುನಾಯಿತ ಪ್ರತಿನಿಧಿಗಳಾದವರು ಆ ಬಳಿಕ ಪ್ರತಿಯೊಂದಕ್ಕೂ ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳುತ್ತಾರೆ. ಅದರಲ್ಲೂ ಸಚಿವ, ಶಾಸಕ, ಮಂತ್ರಿ, ಮುಖ್ಯಮಂತ್ರಿ, ಪ್ರಧಾನಿಯಾದವರಿಗೆ ಬಹುತೇಕ ಎಲ್ಲವೂ ಉಚಿತವಾಗಿರುತ್ತದೆ. ಆದರೆ ನರೇಂದ್ರ ಮೋದಿ ಅವರ ವಿಷಯದಲ್ಲಿ ಮಾತ್ರ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ.

ಹೌದು, ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಸರ್ಕಾರದಿಂದ ಈವರೆಗೆ ಎಷ್ಟು ವೈದ್ಯಕೀಯ ವೆಚ್ಚ ಪಡೆದಿದ್ದಾರೆ ಎಂದು ಮಾಹಿತಿ ಕೇಳಿದ್ದರು. ಇದಕ್ಕೆ ಉತ್ತರಿಸಿರುವ ಪ್ರಧಾನಿ ಕಾರ್ಯಾಲಯ, ನರೇಂದ್ರ ಮೋದಿಯವರು ಒಂದು ರೂಪಾಯಿಯನ್ನೂ ವೈದ್ಯಕೀಯ ವೆಚ್ಚವಾಗಿ ಸರ್ಕಾರದ ಖಜಾನೆಯಿಂದ ಪಡೆದುಕೊಂಡಿಲ್ಲ ಎಂದು ತಿಳಿಸಿದೆ.

ಪುಣೆ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಪ್ರಫುಲ್ ಸರ್ಜಾ ಅವರಿಗೆ ಈ ಮಾಹಿತಿ ನೀಡಲಾಗಿದ್ದು, ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆ ಅಲಂಕರಿಸಿದ 2014ರ ಮೇ 26 ರಿಂದ ಇಲ್ಲಿಯವರೆಗೆ ವೈದ್ಯಕೀಯ ವೆಚ್ಚವಾಗಿ ಸರ್ಕಾರದ ಬೊಕ್ಕಸದಿಂದ ಯಾವುದೇ ಹಣ ಪಡೆದುಕೊಂಡಿಲ್ಲ ಎಂದು ವಿವರಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read