ಪ್ಯಾರಿಸ್ ಒಲಿಂಪಿಕ್ಸ್: ಹಾಕಿಯಲ್ಲಿ ಚಿನ್ನದ ಕನಸು ಭಗ್ನ: ಸೆಮಿಫೈನಲ್ ನಲ್ಲಿ ಜರ್ಮನಿ ವಿರುದ್ಧ ಭಾರತಕ್ಕೆ ಸೋಲು

ಹಾಕಿ ಸೆಮಿ ಫೈನಲ್ ನಲ್ಲಿ ಜರ್ಮನಿ ವಿರುದ್ಧ ಭಾರತ ಸೋಲು ಕಂಡಿದೆ. ಕಂಚಿನ ಪದಕಾಗಿ ಭಾರತ ಸ್ಪೇನ್ ಜೊತೆಗೆ ಸೆಣೆಸಾಡಲಿದೆ.

2024 ರ ಪ್ಯಾರಿಸ್ ಒಲಿಂಪಿಕ್ಸ್‌ನ ಯೆವ್ಸ್ ಡು ಮನೋಯಿರ್ ಸ್ಟೇಡಿಯಂನಲ್ಲಿ ನಡೆದ ಪುರುಷರ ಹಾಕಿ ಸೆಮಿಫೈನಲ್‌ನಲ್ಲಿ ಭಾರತ ಸೋಲು ಕಂಡಿದೆ. ಜರ್ಮನಿಯು ತನ್ನ ನಾಲ್ಕನೇ ಚಿನ್ನದ ಗುರಿಯನ್ನು ಹೊಂದಿದೆ. ಮಂಗಳವಾರದ ಪಂದ್ಯದಲ್ಲಿ ಜರ್ಮನಿ 3-2 ರಲ್ಲಿ ಗೆದ್ದಿದೆ.

54ನೇ ನಿಮಿಷದಲ್ಲಿ ಮಾರ್ಕೊ ಮಿಲ್ಟ್‌ಕೌ ಅವರು ಗೊಂಜಾಲೊ ಪೆಯಿಲಾಟ್‌ನ ನೆರವಿನಿಂದ ಗಳಿಸಿದ ನಿರ್ಣಾಯಕ ಗೋಲು ಗೆಲುವಿಗೆ ಮುನ್ನುಡಿ ಬರೆದಿದೆ. ಇಡೀ 60 ನಿಮಿಷಗಳ ಪಂದ್ಯವನ್ನು ಗಣನೆಗೆ ತೆಗೆದುಕೊಂಡರೆ ಜರ್ಮನಿಯು ಉತ್ತಮ ತಂಡವಾಗಿತ್ತು. ತೀವ್ರವಾದ ಕ್ಷಣಗಳಲ್ಲಿ ಜರ್ಮನಿಯು ಸೆಮಿಫೈನಲ್‌ನಲ್ಲಿ ಮೇಲುಗೈ ಸಾಧಿಸಿತು.

ಭಾರತ ಮೊದಲ ಮತ್ತು ಮೂರನೇ ಮತ್ತು ಜರ್ಮನಿ ಎರಡನೇ ಮತ್ತು ನಾಲ್ಕನೇ ಹಂತದಲ್ಲಿ ಪ್ರಾಬಲ್ಯ ಸಾಧಿಸಿತು ಆದರೆ, ಚಿನ್ನದ ಪದಕದ ಪಂದ್ಯ ಪ್ರವೇಶಕ್ಕೆ ಒಂದು ಗೋಲಿನೊಂದಿಗೆ ಸೆಮಿಫೈನಲ್ ಪಂದ್ಯವನ್ನು ಜರ್ಮನಿ ಗೆದ್ದಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read