ಪುರುಷರು ಒಂದು ಗ್ಲಾಸ್ ʼಹಾಲುʼ ಕುಡಿದ್ರೆ ಹೆಚ್ಚುತ್ತೆ ಈ ಶಕ್ತಿ

ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗಿದೆ. ಇದ್ರಲ್ಲಿರುವ ಮಿನರಲ್ ಹಾಗೂ ವಿಟಮಿನ್ ಎಲ್ಲ ವಯಸ್ಸಿನ ವ್ಯಕ್ತಿಗಳಿಗೂ ಪ್ರಯೋಜನಕಾರಿಯಾಗಿದೆ. ಸಾಮಾನ್ಯವಾಗಿ ಮಕ್ಕಳು ಹಾಗೂ ಮಹಿಳೆಯರು ಆರೋಗ್ಯದ ದೃಷ್ಟಿಯಿಂದ ಹಾಲನ್ನು ಕುಡಿಯುತ್ತಾರೆ. ಆದ್ರೆ ವೈದ್ಯರ ಪ್ರಕಾರ ಮಕ್ಕಳು-ಮಹಿಳೆಯರೊಂದೇ ಅಲ್ಲ ಪುರುಷರೂ ಹಾಲನ್ನು ಕುಡಿಯುವುದು ಬಹಳ ಪ್ರಯೋಜನಕಾರಿ.

ರಾತ್ರಿ ಮಲಗುವ ಮೊದಲು ಪುರುಷರು ಒಂದು ಗ್ಲಾಸ್ ಹಾಲನ್ನು ಕುಡಿಯಬೇಕೆಂದು ತಜ್ಞ ವೈದ್ಯರು ಸಲಹೆ ನೀಡುತ್ತಾರೆ. ಪುರುಷರು ರಾತ್ರಿ ಹಾಲು ಕುಡಿದು ಮಲಗಿದ್ರೆ ಸುಖವಾದ ನಿದ್ರೆ ಬರುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಇದ್ರಲ್ಲಿರುವ ಟ್ರಿಪ್ಟೊಫಾನ್ ಎಂಬ ಅಮೈನೊ ಆಸಿಡ್ ಮೆದುಳನ್ನು ಶಾಂತಗೊಳಿಸಿ ಸುಖ ನಿದ್ರೆ ಬರುವಂತೆ ಮಾಡುತ್ತದೆ.

ಹಾಲಿನಲ್ಲಿರುವ ನೀರಿನ ಅಂಶ ಜೀರ್ಣಾಂಗವನ್ನು ಆರೋಗ್ಯವಾಗಿರಿಸುತ್ತದೆ. ಜೀರ್ಣಕ್ರಿಯೆ ಸುಲಭವಾಗುತ್ತದೆ.

ಜಪಾನ್ ನಲ್ಲಿ ನಡೆದ ಸಂಶೋಧನೆಯೊಂದರ ಪ್ರಕಾರ, ಹಾಲಿನಲ್ಲಿರುವ ಕ್ಯಾಲ್ಸಿಯಂ ಪಾರ್ಶ್ವವಾಯು ಬರದಂತೆ ತಡೆಯುತ್ತದೆಯಂತೆ.

ಹಾಲಿನಲ್ಲಿರುವ ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಂ ರಕ್ತದೊತ್ತಡವನ್ನು ನಿಯಂತ್ರಿಸುತ್ತೆ. ಬಿಪಿ ಬರದಂತೆ ತಡೆಯುತ್ತದೆ.

ಪುರುಷರ ಸ್ನಾಯುಗಳನ್ನು ಹಾಗೂ ಮೂಳೆಗಳನ್ನು ಬಲಪಡಿಸುತ್ತದೆ.

ಕ್ಯಾಲ್ಸಿಯಂ ಹಾಗೂ ಪ್ರೊಟೀನ್ ಗಳು ಕೊಬ್ಬು ಕರಗಿಸಲು ನೆರವಾಗುತ್ತವೆ. ಇದ್ರಿಂದ ಸ್ಥೂಲಕಾಯ ಸಮಸ್ಯೆ ಕಾಡುವುದಿಲ್ಲ.

ಹಾಲಿನಲ್ಲಿರುವ ಕೊಬ್ಬು ಹಾಗೂ ಪ್ರೊಟೀನ್ ಪುರುಷರ ಹಾರ್ಮೋನ್ ಗಳನ್ನು ಸಕ್ರಿಯಗೊಳಿಸುತ್ತದೆ. ಇದ್ರಿಂದ ಫರ್ಟಿಲಿಟಿ ಹೆಚ್ಚಾಗುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read