ನೈಸ್ ರಸ್ತೆಯಲ್ಲಿ ಪತ್ತೆಯಾಯ್ತು 2000 ಮುಖಬೆಲೆಯ 10 ಕೋಟಿ ರೂ. ನಕಲಿ ನೋಟು…!

ಬೆಂಗಳೂರು: ಬೆಂಗಳೂರಿನ ನೈಸ್ ರಸ್ತೆಯ ಬಳಿ ಪೊದೆಯೊಂದರಲ್ಲಿ 2000 ಮುಖ ಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಪೊದೆಯೊಂದರಲ್ಲಿದ್ದ ಸೂಟ್ ಕೇಸ್ ತೆಗೆದು ನೋಡಿದ ಜನರು ರಾಶಿ ರಾಶಿ ಹಣವನ್ನು ಕಂಡು ಶಾಕ್ ಆಗಿದ್ದಾರೆ.

ನೈಸ್ ರಸ್ತೆಯ ಬಳಿ ತಲಘಟ್ಟಪುರ ಠಾಣೆ ವ್ಯಾಪ್ತಿಯಲ್ಲಿ ಪೊದೆಯಲ್ಲಿ ಸೂಟ್ ಕೇಸ್ ವೊಂದು ಪತ್ತೆಯಾಗಿದ್ದು, ಸೂಟ್ ಕೇಸ್ ನಲ್ಲಿ 2000 ರೂಪಾಯಿ ಮುಖಬೆಲೆಯ ಕಂತೆ ಕಂತೆ ನಕಲಿ ನೋಟ್ ಗಳು ಪತ್ತೆಯಾಗಿವೆ. ಇದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

2000 ಮುಖಬೆಲೆಯ ಜೆರಾಕ್ಸ್ ಮಾಡಿದ ನಕಲಿ ನೋಟ್ ಗಳು ಇದಾಗಿದ್ದು, 10 ಕೋಟಿ ರೂ ನಕಲಿ ನೋಟುಗಳು ಸೋಟ್ ಕೇಸ್ ನಲ್ಲಿವೆ. ಪೊಲೀಸರು ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದು, ನಕಲಿ ನೋಟುಗಳು ಇಲ್ಲಿಗೆ ಹೇಗೆ ಬಂತು? ಇದರ ಹಿಂದಿನ ಜಾಲ ಯಾವುದು? ಎಬ ಬಗ್ಗೆ ತನಿಖೆ ನಡೆಸಿದ್ದಾರೆ. ಕಂತೆ ಕಂತೆ ಹಣವಿರುವ ಸೂಟ್ ಕೇಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read