ನೂತನ ಇನ್ನೋವಾ ಕ್ರಿಸ್ಟಾಗೆ ಬುಕಿಂಗ್ ಆರಂಭ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ಹೊಸ ಇನ್ನೋವಾ ಕ್ರಿಸ್ಟಾ ಕಾರಿನ ಬುಕಿಂಗ್ ಅನ್ನು ಪ್ರಾರಂಭಿಸಿದೆ. 2005 ರಲ್ಲಿ ಪರಿಚಯಿಸಿದಾಗಿನಿಂದ, ಈ ವಾಹನವು ಭಾರತೀಯ ಮಾರುಕಟ್ಟೆಯಲ್ಲಿ ಮನೆಮಾತಾಗಿದೆ, ಅದರ ವಿಶ್ವಾಸಾರ್ಹತೆ, ಆರಾಮದಾಯಕ, ಸುರಕ್ಷತೆ, ಐಷಾರಾಮಿ ಮತ್ತು ಶಕ್ತಿಗಾಗಿ ಗ್ರಾಹಕರ ಮೆಚ್ಚುಗೆಯನ್ನು ಗಳಿಸಿದೆ.

ಹೊಸ ಇನ್ನೋವಾ ಕ್ರಿಸ್ಟಾ ಈಗ ಅತ್ಯಾಧುನಿಕ ಫ್ರಂಟ್ ಫ್ಯಾಸಿಯಾದೊಂದಿಗೆ ಬಿಡುಗಡೆಯಾಗಿದೆ. ಇದನ್ನು ಒರಟಾದ ಮತ್ತು ದೃಢವಾದ ನೋಟಕ್ಕಾಗಿ ನಿರ್ಧಿಷ್ಟ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಆ ಮೂಲಕ ಭಾರತೀಯ ಕುಟುಂಬಗಳು, ಉದ್ಯಮಿಗಳು, ಕಾರ್ಪೋರೇಟ್ಸ್ ಮತ್ತು ಫ್ಲೀಟ್ ಮಾಲೀಕರ ಅಗತ್ಯಗಳನ್ನು ಪೂರೈಸುತ್ತದೆ.

ಇತ್ತೀಚೆಗೆ ಬಿಡುಗಡೆಯಾದ ಇನ್ನೋವಾ ಹೈಕ್ರಾಸ್ (ಗ್ಯಾಸೋಲಿನ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಪವರ್ ಟ್ರೇನ್ ಲಭ್ಯವಿದೆ) ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಇದನ್ನು ಅನುಸರಿಸಿ ಹೊಸ ಇನ್ನೋವಾ ಕ್ರಿಸ್ಟಾ ಬುಕಿಂಗ್ ತೆರೆಯಲಾಗಿದೆ. ಇದು ಅದರ ಗ್ಲಾಮರ್, ಸುಧಾರಿತ ತಂತ್ರಜ್ಞಾನ, ಆರಾಮದ ಜೊತೆಗೆ ಸುರಕ್ಷತೆ ಮತ್ತು ಚಾಲನೆ ಮಾಡಲು ರೋಮಾಂಚನದಿಂದಾಗಿ ಏಕಾಂಗಿಯಾಗಿ ಅಥವಾ ಕುಟುಂಬದೊಂದಿಗೆ ಪ್ರಯಾಣಿಸಲು ಪ್ರತಿ ಸಂದರ್ಭಕ್ಕೂ ಸೂಕ್ತವಾದ ವಾಹನವಾಗಿದೆ.

ಇನ್ನೋವಾ ಹೈಕ್ರಾಸ್ ಬಿಡುಗಡೆಯ ನಂತರ ಹೊಸ ಇನ್ನೋವಾ ಕ್ರಿಸ್ಟಾಗಾಗಿ ಬುಕಿಂಗ್ ಪ್ರಾರಂಭವು ಗ್ರಾಹಕರಿಗೆ ಟೊಯೊಟಾದ ಬಹು ತಂತ್ರಜ್ಞಾನ ವಿಧಾನಕ್ಕೆ ಸಾಕ್ಷಿಯಾಗಿದೆ ಮತ್ತು ಡೀಸೆಲ್ ಪವರ್ ಟ್ರೇನ್ ಹೊಂದಲು ಬಯಸುವವರಿಗೆ ಸೇವೆ ಸಲ್ಲಿಸುತ್ತದೆ.

ಇಂದಿನಿಂದ ಹೊಸ ಇನ್ನೋವಾ ಕ್ರಿಸ್ಟಾ ಬುಕಿಂಗ್ 50,000 ರೂ.ಗೆ ಲಭ್ಯವಿದೆ. ಗ್ರಾಹಕರು ಈಗ ಡೀಲರ್ ಔಟ್ ಲೆಟ್ ಗಳಲ್ಲಿ ಮತ್ತು www.toyotabharat.com ಆನ್ ಲೈನ್ ನಲ್ಲಿ ಬುಕ್ ಮಾಡಬಹುದು.  ಹೊಸ ಇನ್ನೋವಾ ಕ್ರಿಸ್ಟಾ G, GX, VX &ZX , ಎಂಬ ನಾಲ್ಕು ಗ್ರೇಡ್ ಗಳಲ್ಲಿ ಲಭ್ಯವಿದೆ ಮತ್ತು ವೈಟ್ ಪಿಯರ್ಲ್ ಕ್ರಿಸ್ಟಲ್ ಶೈನ್, ಸೂಪರ್ ವೈಟ್, ಸಿಲ್ವರ್, ಆಟಿಟ್ಯೂಡ್ ಬ್ಲ್ಯಾಕ್ ಮತ್ತು ಅವಂತ್ ಗ್ರೇಸ್ ಬ್ರೋನ್ಸ್ ಎಂಬ ಐದು ಬಣ್ಣಗಳಲ್ಲಿ ಲಭ್ಯವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read