ನುಗ್ಗೆ ಸೊಪ್ಪಿನಲ್ಲಿದೆ ಹಲವು ವಿಧದ ಲಾಭ…..!

ನಿಮ್ಮ ನುಗ್ಗೆ ಗಿಡದಲ್ಲಿ ಕಾಯಿ ಬಿಡುತ್ತಿಲ್ಲ ಎಂದು ಬೇಸರಿಸುತ್ತಿದ್ದಿರೇ ಚಿಂತೆ ಬಿಡಿ. ನುಗ್ಗೆ ಕಾಯಿ ಆಗದಿದ್ದರೂ ಪರವಾಗಿಲ್ಲ, ಅದರ ಸೊಪ್ಪಿನಿಂದ ಸಿಗುವ ಹಲವು ವಿಧದ ಲಾಭಗಳನ್ನು ನಿಮ್ಮದಾಗಿಸಿಕೊಳ್ಳಿ.

ನುಗ್ಗೆ ಸೊಪ್ಪಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಗುಣವಿದ್ದು ಇದು ಸನ್ ಬರ್ನ್ ನಿಂದ ನಿಮಗೆ ರಕ್ಷಣೆ ನೀಡುತ್ತದೆ. ಹೊರಗಿನ ಧೂಳು ಮತ್ತು ಕೊಳೆಯಿಂದ ತ್ವಚೆಯನ್ನು ರಕ್ಷಿಸುತ್ತದೆ. ಇದರ ರಸವನ್ನು ಅಥವಾ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಇದರ ಪ್ರಯೋಜನ ಪಡೆಯಬಹುದು.

ನುಗ್ಗೇಕಾಯಿ ಎಣ್ಣೆಯಿಂದ ಮುಖ ಮತ್ತು ಕುತ್ತಿಗೆಗೆ ಮಸಾಜ್ ಮಾಡುತ್ತಾ ಬಂದರೆ ಈ ಭಾಗದಲ್ಲಿರುವ ಕಲೆಗಳು ದೂರವಾಗುತ್ತವೆ. ಇದರ ಎಣ್ಣೆಯಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಎಂಬುದು ಅಧ್ಯಯನಗಳಿಂದ ದೃಢಪಟ್ಟಿದೆ.

ನುಗ್ಗೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೇರಳವಾಗಿದ್ದು ವಾರದಲ್ಲಿ ಎರಡು ಬಾರಿ ಇದನ್ನು ಸೇವಿಸುವುದರಿಂದ ಕ್ಯಾಲ್ಸಿಯಂಗೆ ಪ್ರತ್ಯೇಕ ಮಾತ್ರೆ ತೆಗೆದುಕೊಳ್ಳುವ ಅವಶ್ಯಕತೆಯೇ ಬಾರದು. ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read