ನೀವೇನಾದ್ರೂ ಸ್ಟಿರಾಯ್ಡ್ ಬಳಸ್ತೀರಾ…..? ಹಾಗಾದ್ರೆ ಈ ಸುದ್ದಿ ಓದಿ

ಸಣ್ಣ ಅವಧಿಯಲ್ಲಿ ದೇಹಾರೋಗ್ಯ ಉತ್ತಮಗೊಳ್ಳಲು, ದೇಹಕ್ಕೆ ಬೇಕಿರುವ ಆಕಾರ ಪಡೆಯಲು ಮತ್ತಿತರ ಕಾರಣಗಳಿಗೆ ಸ್ಟಿರಾಯ್ಡ್ ಬಳಸುತ್ತೇವೆ. ಇದರಿಂದ ದೇಹದ ಮೇಲಾಗುವ ತೊಂದರೆಗಳ ಬಗ್ಗೆ ನಿಮಗೆ ಗೊತ್ತೇ…?

ಚರ್ಮದಲ್ಲಿ ಉರಿಯೂತ ಕಾಣಿಸಿಕೊಳ್ಳಲು ಸ್ಟಿರಾಯ್ಡ್ ಗಳೂ ಕಾರಣ. ವೈದ್ಯರ ಸಲಹೆ ಇಲ್ಲದೆ ಸ್ಟಿರಾಯ್ಡ್ ಸೇವಿಸುವುದರಿಂದ ಮತ್ತಷ್ಟು ಹೊಸ ಚರ್ಮದ ಕಾಯಿಲೆಗಳು ಕಾಣಿಸಿಕೊಂಡಾವು. ನಿರಂತರವಾಗಿ ಸ್ಟಿರಾಯ್ಡ್ ಸೇವಿಸುವುದರಿಂದ ಸಮಸ್ಯೆಗಳು ಉಲ್ಪಣಗೊಳ್ಳುತ್ತವೆ. ಇದರಿಂದ ಚರ್ಮದ ಪದರಗಳಲ್ಲಿರುವ ಕೂದಲು, ಕಿರುಚೀಲಗಳು ಉಬ್ಬಿಕೊಳ್ಳಬಹುದು.

ನಿರ್ದಿಷ್ಟ ದೇಹಭಾಗದ ಚರ್ಮ ತೆಳುವಾಗಬಹುದು. ಸ್ಟಿರಾಯ್ಡ್ ಹೆಚ್ಚಿನ ಬಳಕೆಯಿಂದ ಮೊಡವೆಗಳು ಅಧಿಕವಾಗಬಹುದು. ಚರ್ಮದ ಮೇಲ್ಭಾಗದಲ್ಲಿ ಕಪ್ಪು ತೇಪೆಗಳು ಕಾಣಿಸಿಕೊಂಡಾವು.

ರೋಗಕ್ಕೆ ತಕ್ಷಣ ಪರಿಣಾಮ ದೊರೆತರೂ ಇದರಿಂದ ತ್ವಚೆಯ ಮೇಲಾಗುವ ಪರಿಣಾಮಗಳು ಅಪಾರ. ಇದರ ಅತಿಯಾದ ಬಳಕೆ ಹೃದಯಕ್ಕೂ, ಪ್ರಾಣಕ್ಕೂ ಅಪಾಯವಾಗುವ ಸಾಧ್ಯತೆಗಳು ಅಧಿಕ. ಹಾಗಾಗಿ ಸಾಧ್ಯವಾದಷ್ಟು ಸ್ಟಿರಾಯ್ಡ್ ಗಳನ್ನು ದೂರವಿಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read