ನೀರು ಕುಡಿಯಲು ಸರಿಯಾದ ಸಮಯ ತಿಳಿದಿರಬೇಕು, ಇಲ್ಲದಿದ್ದರೆ ಲಾಭದ ಬದಲು ಆರೋಗ್ಯಕ್ಕಾಗಬಹುದು ನಷ್ಟ…..!

ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಸಾಕಷ್ಟು ನೀರು ಕುಡಿಯುವುದು ಅವಶ್ಯಕ. ಬೇಸಿಗೆಯಲ್ಲಿ ಹೆಚ್ಚು ಬೆವರುವುದರಿಂದ ನೀರಿನ ಅವಶ್ಯಕತೆ ಇನ್ನಷ್ಟು ಹೆಚ್ಚುತ್ತದೆ. ನೀರು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ತರುತ್ತದೆ. ಆದರೆ ತಪ್ಪಾದ ಸಮಯದಲ್ಲಿ ನೀರು ಕುಡಿಯುವುದರಿಂದ ಅನೇಕ ರೀತಿಯ ಸಮಸ್ಯೆಗಳಾಗುತ್ತವೆ. ತಪ್ಪಾದ ಸಮಯದಲ್ಲಿ ನೀರು ಕುಡಿದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಬೊಜ್ಜು ಮತ್ತು ಮಲಬದ್ಧತೆಯಂತಹ ಕಾಯಿಲೆಗಳು ನಿಮ್ಮನ್ನು ಸುತ್ತುವರಿಯಬಹುದು. ನೀರಿನಿಂದ ಅಪಾರ ಪ್ರಯೋಜನಗಳನ್ನು ಪಡೆಯಲು, ಅದನ್ನು ಕುಡಿಯಲು ಸರಿಯಾದ ಸಮಯವನ್ನು ತಿಳಿದುಕೊಳ್ಳುವುದು ಮುಖ್ಯ.ಯಾವ ಸಮಯದಲ್ಲಿ ನೀರು ಕುಡಿಯಬಾರದು ಎಂಬುದನ್ನು ಸಹ ತಿಳಿದುಕೊಳ್ಳಬೇಕು.

ಈ ಸಮಯದಲ್ಲಿ ನೀರು ಕುಡಿಯಬಾರದು..!

ಅನೇಕರು ಊಟ ಮಾಡಿದ ತಕ್ಷಣ ನೀರು ಕುಡಿಯುತ್ತಾರೆ. ಕೆಲವರು ಊಟದ ನಡುವೆಯೇ ನೀರು ಕುಡಿಯಲು ಪ್ರಾರಂಭಿಸುತ್ತಾರೆ. ಆದರೆ ಈ ತಪ್ಪುಗಳನ್ನು ಮಾಡಬೇಡಿ. ಏಕೆಂದರೆ ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಯಾವಾಗ ನೀರು ಕುಡಿಯಬಾರದು?

1. ಮಲಗುವ ಮುನ್ನ ನೀರು ಕುಡಿಯಬೇಡಿ.

2. ತಿಂದ ತಕ್ಷಣ ನೀರು ಕುಡಿಯಬೇಡಿ.

3. ಮೂತ್ರ ವಿಸರ್ಜನೆಯ ನಂತರ ನೀರು ಕುಡಿಯಬೇಡಿ.

4. ಊಟ ಮಾಡುವಾಗ ನೀರು ಕುಡಿಯಬೇಡಿ

ಯಾವಾಗ ನೀರು ಕುಡಿಯಬೇಕು?

1. ಬೆಳಗ್ಗೆ ಎದ್ದ ನಂತರ ಮೊದಲು ಉಗುರುಬೆಚ್ಚನೆಯ ನೀರನ್ನು ಕುಡಿಯಿರಿ.

2. ಆಹಾರ ಸೇವಿಸುವ 30 ನಿಮಿಷಗಳ ಮೊದಲು ನೀರು ಕುಡಿಯಿರಿ.

3. ವ್ಯಾಯಾಮದ ಮೊದಲು, ವ್ಯಾಯಾಮದ ಸಮಯದಲ್ಲಿ ಮತ್ತು ನಂತರ ನೀರನ್ನು ಕುಡಿಯಿರಿ.

4. ಮಲಗುವ 1-2 ಗಂಟೆಗಳ ಮೊದಲು ನೀರು ಕುಡಿಯಿರಿ.

5. ತಲೆನೋವು ಮತ್ತು ಮೈಗ್ರೇನ್‌ ಇದ್ದಾಗ ಹೆಚ್ಚು ನೀರು ಕುಡಿಯಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read