ನಿಮ್ಮ ಮಕ್ಕಳೂ ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕಾ….? ಹಾಗಾದರೆ ವಾಸ್ತು ಶಾಸ್ತ್ರದಲ್ಲಿ ಕಾದಿದೆ ನಿಮಗೊಂದು ಉತ್ತಮ ಟಿಪ್ಸ್​

ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕು. ತರಗತಿಗೇ ಅವರು ಮೊದಲ ರ್ಯಾಂಕ್​ ಹೊಂದಬೇಕು ಎಂಬ ಆಸೆ ಯಾವ ಪೋಷಕರಿಗೆ ಇರುವುದಿಲ್ಲ ಹೇಳಿ.

ನೀವು ಕೂಡ ಇಂತದ್ದೇ ಕನಸು ಕಾಣುತ್ತಿರುವ ಪೋಷಕರಾಗಿದ್ದರೆ ವಾಸ್ತು ಶಾಸ್ತ್ರದಲ್ಲಿ ನಿಮಗೊಂದು ಉತ್ತಮ ಟಿಪ್ಸ್​ ಕಾದಿದೆ.

ಮಕ್ಕಳ ಓದುವ ಕೋಣೆಯು ಅವರ ಜ್ಞಾಪಕ ಶಕ್ತಿಯನ್ನು ನಿರ್ಧರಿಸುತ್ತೆ ಎಂದು ಹೇಳುತ್ತದೆ ವಾಸ್ತು ಶಾಸ್ತ್ರ, ಮಕ್ಕಳು ಓದು ಕೋಣೆಯಲ್ಲಿ ಗಾಳಿ – ಬೆಳಕು ಓಡಾಡುವುದರ ಜೊತೆಯಲ್ಲಿ ಅದರ ಬಣ್ಣ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಓದುವ ಕೋಣೆಯು ಎಷ್ಟು ಶಾಂತ ರೀತಿಯಿಂದ ಇರಬೇಕೋ ಕೋಣೆಯ ಬಣ್ಣ ಕೂಡ ಅಷ್ಟೇ ತಿಳಿಯಾಗಿ ಇರಬೇಕು.

ಹೌದು..! ವಾಸ್ತು ಶಾಸ್ತ್ರದ ಪ್ರಕಾರ ಓದುವ ಕೋಣೆಗೆ ಯಾವಾಗಲು ತಿಳಿಯಾದ ಬಣ್ಣವನ್ನೇ ಪೇಂಟ್​ ಮಾಡಬೇಕು. ಉದಾಹರಣೆಗೆ ತಿಳಿ ಹಸಿರು, ಕ್ರೀಂ ಬಣ್ಣ, ಹಳದಿ, ತಿಳಿ ನೀಲಿ, ಕಂದು ಬಣ್ಣ ಇವೆಲ್ಲವೂ ಓದುವ ಕೋಣೆಗೆ ಉತ್ತಮ ಆಯ್ಕೆಯಾಗಿದೆ.

ವಾಸ್ತು ಶಾಸ್ತ್ರದಲ್ಲಿ ತಿಳಿ ಬಣ್ಣವು ಹೆಚ್ಚು ಶುಭಕರ ಎಂದು ಪರಿಗಣಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಹಳದಿ ಬಣ್ಣವು ಮಕ್ಕಳ ಓದಿನ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read